ಸಮುದ್ರದ ಸುಳಿಗೆ ಸಿಲುಕಿದ ಪ್ರವಾಸಿಗನ ಜೀವ ರಕ್ಷಿಸಿದ ಜೀವರಕ್ಷಕರು

ಹೊಸದಿಗಂತ ವರದಿ, ಗೋಕರ್ಣ:

ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮುಂಜಾನೆ ಕುಡ್ಲೆ ಕಡಲತೀರದಲ್ಲಿ ನಡೆದಿದೆ.

ಬೆಂಗಳೂರುನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಕೇರಳ ಮೂಲದ ರಾಜಿಕ ಸಿ . ಪಿ.(೨೬)ಪ್ರಾಣಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದು, ಅವರು ತಮ್ಮ ಸ್ನೇಹಿತನೊಂದಿಗೆ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.

ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ನಾಗೇಂದ್ರ ಎಸ್. ಕುರ್ಲೆ, ಮಂಜುನಾಥ ಸದಾನಂದ ಹೋಸ್ಕಟ್ಟಾ ಅವರು ತಕ್ಷಣ ಧಾವಿಸಿ ಸುಳಿಯಿಂದ ಪಾರು ಮಾಡಿ ದಡಕ್ಕೆ ತಂದು ಜೀವ ಉಳಿಸಿದ್ದಾರೆ.

ಇವರಗೆ ಪ್ರವಾಸಿ ಮಿತ್ರ ರಘುವೀರ ನಾಯ್ಕ್, ಕರಾವಳಿ ಕಾವಲು ಪಡೆಯ ಕೆಎನ್‌ಡಿ ಸಿಬ್ಬಂದಿ ವಿಷ್ಣು ಕುರ್ಲೆ, ಮೈಸ್ಟಿಕ್ ಅಡ್ವೆಂಚರ್‌ನ ಸಿಬ್ಬಂದಿ ಆದಿತ್ಯ ಅಂಕೋಲಾ, ಲೋಹಿತ್, ಸೂರಜ್ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!