ರಾತ್ರಿ ಎಷ್ಟು ಕಡಿಮೆ ತಿನ್ನುತ್ತೀರೋ ಅಷ್ಟು ಒಳ್ಳೆಯದು. ಅದರಲ್ಲಿಯೂ ಸಲಾಡ್, ಸೂಪ್ ಅಥವಾ ಗಂಜಿ ಕುಡಿದು ಮಲಗೋ ಅಭ್ಯಾಸ ಇದ್ದರೆ ಇನ್ನೂ ಒಳ್ಳೆಯದು. ಬೇರೆ ಬೇರೆ ಅಂಗಗಳಿಗೆ ರೆಸ್ಟ್ ನೀಡಬೇಕು ಎಂದರೆ ಊಟ ಬೇಗ ಮಾಡಬೇಕು. ರಾತ್ರಿ ಮಲಗುವ ಮೂರು ಗಂಟೆ ಮುನ್ನವೇ ಊಟ ಮುಗಿಸಿದ್ರೆ ಇಡೀ ದೇಹಕ್ಕೆ ರೆಸ್ಟ್ ಸಿಗುತ್ತದೆ. ಇಲ್ಲಿದೆ ಮೂರು ಬೆಸ್ಟ್ ಡಿನ್ನರ್ ಐಡಿಯಾಗಳು..
ಸಲಾಡ್: ಯಾವುದೇ ರೀತಿಯ ಸಲಾಡ್ ರಾತ್ರಿ ಬೆಸ್ಟ್, ಆದರೆ ಸೌತೆಕಾಯಿ ಬಳಕೆ ರಾತ್ರಿ ಬೇಡ. ಕಾಳುಗಳ ಸಲಾಡ್, ತರಕಾರಿ ಸಲಾಡ್, ಎಗ್ ಅಥವಾ ಚಿಕನ್ ಸಲಾಡ್ ಬೆಸ್ಟ್

ಸೂಪ್: ರಾಗಿ ಸೂಪ್, ಸ್ವೀಟ್ ಕಾರ್ನ್ ಸೂಪ್ ಹೀಗೆ ನೆಚ್ಚಿನ ಸೂಪ್‌ನ್ನು ಸೇವಿಸಿ ಮಲಗಿ, ದೇಹ ಲೈಟ್ ಆಗಿರುತ್ತದೆ.

ಟಿಕ್ಕಿ/ ಉಪ್ಪಿಟ್ಟು: ತರಕಾರಿ ಹಾಗೂ ಪನೀರ್ ಬಳಸಿ ಮಾಡುವ ಟಿಕ್ಕಿ, ಅಥವಾ ಓಟ್ಸ್ ಉಪ್ಪಿಟ್ಟು ಮಾಡಿ ತಿನ್ನಿ. ಕ್ವಾಂಟಿಟಿ ಕಡಿಮೆ ಇರಲಿ.


