ಲಡಾಖ್​, ಕಾರ್ಗಿಲ್​ನಲ್ಲಿ ಲಘು ಭೂಕಂಪನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಡಾಖ್​, ಕಾರ್ಗಿಲ್​ನ ವಿವಿಧೆಡೆ ಇಂದು ಮಧ್ಯಾಹ್ನ 2:53ರ ಸುಮಾರಿಗೆ ಲಘು ಭೂಕಂಪನ ಉಂಟಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ ರಿಕ್ಟರ್​ ಮಾಪಕದಲ್ಲಿ 4.2ರ ತೀವ್ರತೆ ದಾಖಲಾಗಿದೆ.
ಲಡಾಖ್​ ಅಲ್ಲದೇ, ಕಾರ್ಗಿಲ್​ ಪ್ರದೇಶದ ಸುತ್ತಲಿನ 195 ಕಿಲೋ ಮೀಟರ್​ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವು, ನಷ್ಟದ ಬಗ್ಗೆ ವರದಿಗಳು ಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here