ಮಲೇಷ್ಯಾದಲ್ಲಿ ಲಘು ವಿಮಾನ ಪತನ: 10 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಲೇಷ್ಯಾದ (Malaysia) ಸೆಂಟ್ರಲ್ ಸೆಲಂಗೋರ್ ರಾಜ್ಯದಲ್ಲಿ ಲಘು ವಿಮಾನವೊಂದು (Light Plane) ಲ್ಯಾಂಡಿಂಗ್ ಮಾಡುವ ವೇಳೆ ಕಾರು ಮತ್ತು ಮೋಟರ್ ಸೈಕಲ್‌ಗೆ ಡಿಕ್ಕಿ ಹೊಡೆದು ಪತನಗೊಂಡಿದೆ.

ಈ ವೇಳೆ ವಿಮಾನದಲ್ಲಿದ್ದ 8 ಜನ ಹಾಗೂ ಇಬ್ಬರು ಚಾಲಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

ವಿಮಾನ ಅಪಘಾತದಲ್ಲಿ (Plane Crash) ಒಬ್ಬರು ಮೋಟಾರ್ ಸೈಕಲ್ ಚಾಲಕ, ಇನ್ನೊಬ್ಬರು ಕಾರು ಚಾಲಕ ಮತ್ತು ವಿಮಾನದಲ್ಲಿದ್ದ 8 ಜನ ಸೇರಿದಂತೆ ಒಟ್ಟು 10 ಜನರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಲೇಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ (Civil Aviation Authority) ನೀಡಿರುವ ಹೇಳಿಕೆಯಲ್ಲಿ, ವಿಮಾನ ಪತನಗೊಂಡ ಸಂದರ್ಭ 6 ಮಂದಿ ಪ್ರಯಾಣಿಕರು ಮತ್ತು ಇಬ್ಬರು ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ತಿಳಿಸಿದೆ. ಅಲ್ಲದೇ ಘಟನೆಯ ಬಳಿಕ ಸುರಕ್ಷತಾ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!