ಮೈಸೂರು ಝೂನಲ್ಲಿ ಪ್ರಾಣಿಪ್ರಿಯರ ಆಕರ್ಷಣೆಯಾಗಿದ್ದ ಸಿಂಹಿಣಿ ‘ರಕ್ಷಿತಾ’ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ ಸಿಂಹಿಣಿ ‘ರಕ್ಷಿತಾ’ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದ ಸುಮಾರು 21 ವರ್ಷ 4 ತಿಂಗಳು ವಯಸ್ಸಿನ ಹೆಣ್ಣು ಸಿಂಹ ‘ರಕ್ಷಿತ’ ಸಿಂಹಿಣಿ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಗೆ ಸಾವನ್ನಪ್ಪಿದೆ. ವಯೋ ಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಿಂಹಿಣಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಅಂತೆಯೇ ಸಿಂಹಿಣಿ ರಕ್ಷಿತಾ ಸಾವಿಗೆ ಮೈಸೂರು ಮೃಗಾಲಯವು ತೀವ್ರ ಸಂತಾಪ ಸೂಚಿಸಿದೆ. ಈ ಸಿಂಹಿಣಿಯು ದಿನಾಂಕ 01/04/2004ರಂದು ಮೈಸೂರು ಮೃಗಾಲಯದಲ್ಲಿ ನರಸಿಂಹ ಮತ್ತು ಮಾನಿನಿ ಎಂಬ ಸಿಂಹಗಳಿಗೆ ಜನಿಸಿದ್ದು, ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು. ವಯೋಸಹಜ ಕಾಯಿಲೆಯಿಂದಾಗಿ ಈ ಸಿಂಹಿಣಿಯು ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!