ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಆಗಸ್ಟ್ 15 ರಂದು ತನ್ನ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ನಂತರ, ಭಾರತವು ಅದನ್ನು ರಕ್ಷಿಸಲು ಮತ್ತು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಅಗತ್ಯವಾದ ಮಿಲಿಟರಿ ಶಕ್ತಿಯನ್ನು ಸಿದ್ಧಪಡಿಸಿದೆ. ಭಾರತವು ವಿಶ್ವದ ನಾಲ್ಕನೇ ಅತ್ಯಂತ ಶಕ್ತಿಶಾಲಿ ಮಿಲಿಟರಿಯಾಗಿ ಮುಂದುವರಿದಿದೆ. ಭಾರತ ಶಾಂತಿಪ್ರಿಯ ದೇಶ..ಆದರೆ ನಮ್ಮ ಶಾಂತಿಗೆ ಯಾರಾದರೂ ಅಡ್ಡಿಪಡಿಸಿದರೆ ಸುಮ್ಮನಿರುವುದಿಲ್ಲ. ಸ್ವತಂತ್ರ್ಯ ಬಂದಾಗಿನಿಂದ ಭಾರತ ಎದುರಿಸಿದ ಯುದ್ಧಗಳ ಮಾಹಿತಿ ಇಲ್ಲಿದೆ.
1947-48 ಕಾಶ್ಮೀರ ಯುದ್ಧ
ದೇಶದ ಸ್ವಾತಂತ್ರ್ಯದ ನಂತರ, ಪಾಕಿಸ್ತಾನವು ಹಿಂಸಾತ್ಮಕ ಕೃತ್ಯಗಳನ್ನು ಎಸಗಿದ್ದು ಅದು ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಕ್ರಮಣದಿಂದಾಗಿ ಕೋಲಾಹಲ ಉಂಟಾಗಿತ್ತು. ಇದು ಭಾರತ-ಪಾಕಿಸ್ತಾನ ಯುದ್ಧಕ್ಕೆ ಕಾರಣವಾಯಿತು. ಯುದ್ಧವು ಅಕ್ಟೋಬರ್ 22, 1947 ರಿಂದ ಜನವರಿ 5, 1949 ರವರೆಗೆ ನಡೆಯಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ.
1962 ಚೀನಾ-ಭಾರತ ಯುದ್ಧ
ಗಡಿಯಲ್ಲಿ ಚೀನಾದ ಅತಿಕ್ರಮಣವನ್ನು ತಡೆಯಲು ಭಾರತ ಯುದ್ಧ ಮಾಡಿತು. ಯುದ್ಧವು ನವೆಂಬರ್ 21, 1962 ರಂದು ಪ್ರಾರಂಭವಾಯಿತು ಮತ್ತು ಅದೇ ವರ್ಷ ಅಕ್ಟೋಬರ್ 20 ರಂದು ಕೊನೆಗೊಂಡಿತು. ಅಸ್ಸಾಂನ ಈಶಾನ್ಯ ಫ್ರಾಂಟಿಯರ್ ಏಜೆನ್ಸಿಯ ಅಕ್ಸಾಯ್ ಚಿನ್‌ನಲ್ಲಿ ಯುದ್ಧ ನಡೆಯಿತು. ಚೀನಾ ಗೆಲುವು ಸಾಧಿಸಿ, ಅರುಣಾಚಲ ಪ್ರದೇಶದಲ್ಲಿ ಭಾರತ ಸಾಕಷ್ಟು ಪ್ರದೇಶವನ್ನು ಕಳೆದುಕೊಳ್ಳಬೇಕಾಯಿತು.
1965 ಇಂಡೋ-ಪಾಕ್ ಯುದ್ಧ
ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿಗೆ ಯುದ್ಧಕ್ಕೆ ಇಳಿದವು. ಯುದ್ಧವು ಸೆಪ್ಟೆಂಬರ್ 23 ರಿಂದ ಏಪ್ರಿಲ್ 8, 1965 ರವರೆಗೆ ನಡೆಯಿತು. ಪ್ರಾಂತ್ಯಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.
1967ರ ಸಿನೋ-ಇಂಡಿಯನ್ ಯುದ್ಧ
ನಾಥು ಲಾ, ಚೋ ಲಾ ಘರ್ಷಣೆಗಳು, ಚೀನಾ-ಭಾರತ ಪ್ರತಿಷ್ಠೆ, ಸಿನೋ-ಇಂಡಿಯನ್ ವಾರ್ ಎಂತಲೂ ಕರೆಯುತ್ತಾರೆ. 1962ರ ಯುದ್ಧವನ್ನು ಗೆದ್ದಿದ್ದಕ್ಕೆ ಚೀನಾ ಹೆಮ್ಮೆಪಡುತ್ತಿತ್ತು. ಭಾರತ ಈ ಬಾರಿ ತೀವ್ರವಾಗಿ ಹೋರಾಡಿ ಚೀನಾ ಸರಿಯಾದ ಬುದ್ದಿ ಕಲಿಸಿತು. 1967 ರ ಸೆಪ್ಟೆಂಬರ್ 11 ರಿಂದ 14 ರ ನಡುವೆ ನಾಥು ಲಾದಲ್ಲಿ ಘರ್ಷಣೆಗಳು ನಡೆದವು. ಮತ್ತೆ ಅದೇ ವರ್ಷ ಅಕ್ಟೋಬರ್ 1 ರಂದು ಚೋ ಲಾದಲ್ಲಿ ದೇಶಗಳ ಸೈನಿಕರು ಹೊಡೆದಾಡಿಕೊಂಡರು. ಭಾರತೀಯ ಸೈನಿಕರ ವೀರಾವೇಶದ ಹೋರಾಟದಿಂದಾಗಿ ಚೀನಾ ಸೇನೆ ಹಿಮ್ಮೆಟ್ಟಬೇಕಾಯಿತು.
1971 ಇಂಡೋ-ಪಾಕ್ ಯುದ್ಧ
ಪಾಕಿಸ್ತಾನದಿಂದ ಬಾಂಗ್ಲಾದೇಶದ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಭಾರತ ಗೆದ್ದಿತು. ಈ ಯುದ್ಧವು 3 ರಿಂದ 16 ಡಿಸೆಂಬರ್ 1971 ರವರೆಗೆ ನಡೆಯಿತು. ಭಾರತವು ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಮುಕ್ತಗೊಳಿಸಿತು.
1999 ಕಾರ್ಗಿಲ್ ಯುದ್ಧ
ಭಾರತದಲ್ಲಿ ಕಾರ್ಗಿಲ್ ವಶಪಡಿಸಿಕೊಳ್ಳುವ ಪಾಕಿಸ್ತಾನದ ಸಂಚನ್ನು ಭಾರತ ವಿಫಲಗೊಳಿಸಿತು. ಈ ಯುದ್ಧವು ಮೇ 3 ರಿಂದ ಜುಲೈ 26, 1999 ರವರೆಗೆ ನಡೆಯಿತು. ಭಾರತೀಯ ಸೈನಿಕರ ಹೋರಾಟಕ್ಕೆ ಪಾಕಿಸ್ತಾನ ಬಾಲ ಮುದುರಿಕೊಂಡಿತ್ತು.