ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ, ಸಂಪೂರ್ಣ ಪಟ್ಟಿ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2023ರ ಸೆಪ್ಟೆಂಬರ್‌ ತಿಂಗಳ ಬ್ಯಾಂಕ್‌ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಅನ್ವಯ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಸೇರಿದಂತೆ 16 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರುತ್ತದೆ.

ಆರ್‌ಬಿಐ ಮಾರ್ಗಸೂಚಿ ಅನುಸಾರ ಪ್ರಾದೇಶಿಕ ವಿಶೇಷ ರಜೆಗಳಿದ್ದು, ಅದು ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿ

2023ರ ಸೆಪ್ಟೆಂಬರ್ 3: ಭಾನುವಾರ
2023ರ ಸೆಪ್ಟೆಂಬರ್ 6: ಶ್ರೀಕೃಷ್ಣ ಜನ್ಮಾಷ್ಟಮಿ (ಭುವನೇಶ್ವರ್, ಚೆನ್ನೈ, ಹೈದರಾಬಾದ್ ಮತ್ತು ಪಾಟ್ನಾದಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 7: ಜನ್ಮಾಷ್ಟಮಿ, ಶ್ರೀ ಕೃಷ್ಣ ಅಷ್ಟಮಿ (ಅಹ್ಮದಾಬಾದ್, ಚಂದೀಗಡ, ಡೆಹ್ರಾಡೂನ್, ಗ್ಯಾಂಗ್​ಟೋಕ್, ತೆಲಂಗಾಣ, ಜೈಪುರ್, ಜಮ್ಮು, ಕಾನಪುರ್, ಲಕ್ನೋ, ರಾಯಪುರ್, ರಾಂಚಿ, ಸಿಲಾಂಗ್, ಶಿಮ್ಲಾ ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 9: ಎರಡನೇ ಶನಿವಾರ
2023ರ ಸೆಪ್ಟೆಂಬರ್ 10: ಭಾನುವಾರ
2023ರ ಸೆಪ್ಟೆಂಬರ್ 17: ಭಾನುವಾರ
2023ರ ಸೆಪ್ಟೆಂಬರ್ 18: ವರಸಿದ್ಧಿ ವಿನಾಯಕ ವ್ರತ ಮತ್ತು ವಿನಾಯಕ ಚತುರ್ಥಿ (ಬೆಂಗಳೂರು ಮತ್ತು ತೆಲಂಗಾಣದಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 19: ಗಣೇಶ ಚತುರ್ಥಿ (ಅಹ್ಮದಾಬಾದ್, ಬೇಲಾಪುರ್, ಭುನವೇಶ್ವರ್, ಮುಂಬೈ, ನಾಗಪುರ್ ಮತ್ತು ಪಣಜಿಯಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 20: ಗಣೇಶ ಚತುರ್ಥಿ ಎರಡನೇ ದಿನ (ಕೊಚ್ಚಿ) ಮತ್ತು ನುವಾಖಾಯ್ (ಒಡಿಶಾ)
2023ರ ಸೆಪ್ಟೆಂಬರ್ 22: ಶ್ರೀ ನಾರಾಯಣಗುರು ಸಮಾಧಿ ದಿನ (ಕೊಚ್ಚಿ, ಪಣಜಿ ಮತ್ತು ತಿರುವನಂತಪುರಂ)
2023ರ ಸೆಪ್ಟೆಂಬರ್ 23: ನಾಲ್ಕನೇ ಶನಿವಾರ ಮತ್ತು ಮಹಾರಾಜ ಹರಿಸಿಂಗ್ ಜನ್ಮದಿನ (ಜಮ್ಮು ಮತ್ತು ಕಾಶ್ಮೀರ)
2023ರ ಸೆಪ್ಟೆಂಬರ್ 24: ಭಾನುವಾರ
2023ರ ಸೆಪ್ಟೆಂಬರ್ 25: ಶ್ರೀಮಂತ್ ಶಂಕರದೇವರ ಜನ್ಮೋತ್ಸವ (ಗುವಾಹಟಿಯಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 27: ಪ್ರವಾದಿ ಮೊಹಮ್ಮದ್ ಜನ್ಮದಿನ (ಮಿಲಾದ್ ಇ ಷರೀಫ್) – ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ.
2023ರ ಸೆಪ್ಟೆಂಬರ್ 28: ಈದ್ ಮಿಲಾದ್ (ಅಹ್ಮದಾಬಾದ್, ಬೆಂಗಳೂರು, ಚೆನ್ನೈ, ಕಾನಪುರ್, ಲಕ್ನೋ, ಮುಂಬೈ ಮತ್ತು ನವದೆಹಲಿಯಲ್ಲಿ ಬ್ಯಾಂಕ್ ರಜೆ)
2023ರ ಸೆಪ್ಟೆಂಬರ್ 29: ಇಂದ್ರಜಾತ್ರ, ಈದ್ ಇ ಮಿಲಾದ್ ಉಲ್ ನಬಿ (ಗ್ಯಾಂಗ್​ಟಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್ ರಜೆ)

ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ರಜೆಗಳು ಸಾರ್ವತ್ರಿಕವಾಗಿದ್ದು ದೇಶದ ಎಲ್ಲಾ ಬ್ಯಾಂಕುಗಳು ಬಂದ್ ಆಗಿರುತ್ತವೆ. ಇನ್ನು ಈದ್ ಮಿಲಾದ್, ಕೃಷ್ಣ ಜನ್ಮಾಷ್ಟಮಿ, ವಿನಾಯಕ ಚತುರ್ಥಿ ಹಬ್ಬಗಳೂ ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!