ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ 13 ರಂದು ನಡೆಯಲಿರುವ ರಾಜಸ್ಥಾನ ಉಪಚುನಾವಣೆಯಲ್ಲಿ ಎಲ್ಲಾ ಏಳು ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಪಟ್ಟಿಯ ಪ್ರಕಾರ, ಪಕ್ಷವು ಜುಂಜುನುದಿಂದ ಅಮಿತ್ ಓಲಾ, ರಾಮಗಢದಿಂದ ಆರ್ಯನ್ ಜುಬೇರ್, ದೌಸಾದಿಂದ ದೀನ್ ದಯಾಳ್ ಬೈರ್ವಾ, ಡಿಯೋಲಿ-ಉನಿಯಾರಾದಿಂದ ಕಸ್ತೂರ್ ಚಂದ್ ಮೀನಾ, ಖಿನ್ಸ್ವರ್‌ನಿಂದ ರತನ್ ಚೌಧರಿ, ಸಾಲುಂಬರ್ (ಎಸ್‌ಟಿ) ನಿಂದ ರೇಷ್ಮಾ ಮೀನಾ ಮತ್ತು ಮಹೇಶ್ ರೋಟ್ ಅವರನ್ನು ಕಣಕ್ಕಿಳಿಸಿದೆ.
ರಾಜಸ್ಥಾನ ಉಪಚುನಾವಣೆಗೆ ನವೆಂಬರ್ 13 ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ 15 ರಾಜ್ಯಗಳಲ್ಲಿ 48 ಕ್ಷೇತ್ರಗಳ ಉಪಚುನಾವಣೆಗಳು ನಡೆಯಲಿದೆ.