ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ನೀರಿನ ಗುಣಮಟ್ಟ, ಜೀವವೈವಿಧ್ಯ, ಹಾಗೂ ಸುಸ್ಥಿರ ನಗರ ಅಭಿವೃದ್ಧಿ—ಇವುಗಳ ಆಧಾರದಲ್ಲಿ ಪ್ರತಿ ವರ್ಷ ದೇಶಗಳನ್ನು ಪರೀಕ್ಷಿಸಿ, ‘ಸ್ವಚ್ಛ ರಾಷ್ಟ್ರ’ ಎಂಬ ಪಟ್ಟಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಕಟಿಸಲಾಗುತ್ತದೆ. 2025ರ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (Environmental Performance Index – EPI) ವರದಿಯ ಪ್ರಕಾರ, ಈ ಬಾರಿ ಯುರೋಪಿನ ಹಲವು ದೇಶಗಳು ಮುಂಚೂಣಿಯಲ್ಲಿ ಸ್ಥಾನದಲ್ಲಿದೆ. ಇವುಗಳಲ್ಲಿ ನವೀಕರಿಸಬಹುದಾದ ಇಂಧನ, ಮಾಲಿನ್ಯ ನಿಯಂತ್ರಣ, ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಈ ರಾಷ್ಟ್ರಗಳ ಸಾಧನೆ ಗಮನಾರ್ಹವಾಗಿದೆ.
1. ಎಸ್ಟೋನಿಯಾ
ಇದು ನೈಸರ್ಗಿಕ ಅರಣ್ಯ ಸಂಪತ್ತು ಹಾಗೂ ಜೀವವೈವಿಧ್ಯದ ಸುಸ್ಥಿರ ಬಳಕೆಯಲ್ಲಿ ಅಗ್ರಗಣ್ಯ ರಾಷ್ಟ್ರ. ಶುದ್ಧ ಗಾಳಿಯೊಂದಿಗೆ ಭದ್ರವಾದ ನೀರಿನ ವ್ಯವಸ್ಥೆ ಮತ್ತು ಜೈವಿಕ ಇಂಧನದ ಬಳಕೆ ಇದನ್ನು ಪ್ರಥಮ ಸ್ಥಾನಕ್ಕೆ ತಂದು ನಿಲ್ಲಿಸಿದೆ.
2. ಲಕ್ಸೆಂಬರ್ಗ್
ಹೊರಸೂಸುವಿಕೆ ನಿಯಂತ್ರಣದಲ್ಲಿ ಮಾದರಿಯಾಗಿರುವ ಈ ರಾಷ್ಟ್ರ, ನವೀಕರಿಸಬಹುದಾದ ಇಂಧನ ಬಳಕೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಸಾರಿಗೆ ವ್ಯವಸ್ಥೆಯಲ್ಲಿ ಅತ್ಯುತ್ತಮವಾಗಿದೆ.
3. ಫಿನ್ಲ್ಯಾಂಡ್
ವಿಶಾಲ ಕಾಡು ಪ್ರದೇಶಗಳು, ಶುದ್ಧ ಸರೋವರಗಳು ಮತ್ತು ಅತಿದೊಡ್ಡ ಪೌರ ಯೋಜನೆಗಳಲ್ಲಿ ಪರಿಸರ ಸ್ನೇಹಿ ಯೋಜನೆಗಳು ಫಿನ್ಲ್ಯಾಂಡ್‌ನ್ನು ವಿಶ್ವದ ಅತ್ಯಂತ ಶುದ್ಧ ದೇಶಗಳಲ್ಲಿ ಒಂದಾಗಿ ಮಾಡಿವೆ.
4. ಸ್ವಿಟ್ಜರ್‌ಲ್ಯಾಂಡ್
ಪರಿಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತ್ಯಾಜ್ಯ ಮರುಬಳಕೆ ತಂತ್ರಜ್ಞಾನ ಮತ್ತು ಪರ್ವತಭೂಮಿ ಸಂರಕ್ಷಣೆಗಳಲ್ಲಿ ವಿಶೇಷ ಸಾಧನೆ ಮಾಡಿರುವ ಈ ದೇಶವೂ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
5. ಡೆನ್ಮಾರ್ಕ್
ಪವನ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡೆನ್ಮಾರ್ಕ್, ತಳಮಟ್ಟದ ಪರಿಸರ ನೀತಿಯೊಂದಿಗೆ ಪ್ಲಾಸ್ಟಿಕ್ ನಿರ್ವಹಣೆ, ನೀರಿನ ಸಂರಕ್ಷಣೆ ಮತ್ತು ರೈಲು ಸಾರಿಗೆಗಳಲ್ಲಿ ಭಾರೀ ಬದಲಾವಣೆಗಳನ್ನು ತಂದಿದೆ.
6. ಸ್ವೀಡನ್
ಜಲವಿದ್ಯುತ್, ಪವನ ಶಕ್ತಿ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಸಹಜವಾಗಿ ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡ ದೇಶ. ಇದರ ಪರಿಸರ ನಿಬಂಧನೆಗಳು ವಿಶ್ವದ ಗರಿಷ್ಠ ಮಟ್ಟದಲ್ಲಿ ಇವೆ.
7. ನಾರ್ವೆ
ಜಲವಿದ್ಯುತ್ ಉತ್ಪಾದನೆಯ ಪ್ರಭಾವಿ ಬಳಕೆ, ಶುದ್ಧ ಕುಡಿಯುವ ನೀರಿನ ಮೂಲಗಳು ಮತ್ತು ಕೈಗಾರಿಕಾ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ನಾರ್ವೆ ಉತ್ತಮ ಮಾದರಿ.
8. ಆಸ್ಟ್ರಿಯಾ
ಕೃಷಿ ವಿಧಾನಗಳಲ್ಲಿ ರಾಸಾಯನಿಕ ಬಳಕೆಗೆ ಕಟ್ಟುನಿಟ್ಟನ್ನು ತೆಗೆದುಕೊಂಡಿರುವ ಆಸ್ಟ್ರಿಯಾ, ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಶ್ರೇಷ್ಠ. ತ್ಯಾಜ್ಯ ಮರುಬಳಕೆ ಮತ್ತು ಹಸಿರು ಸಾರಿಗೆ ದೊಡ್ಡ ಪಾತ್ರ ವಹಿಸುತ್ತವೆ.
9. ಯುನೈಟೆಡ್ ಕಿಂಗ್‌ಡಮ್ (UK)
ಇಂಗಾಲದ ಬಳಕೆಯ ಮೇಲೆ ಕಡಿತ, ಪವನ ಶಕ್ತಿ ಉತ್ತೇಜನೆ ಮತ್ತು ಪಬ್ಲಿಕ್ ಪಾರ್ಕ್‌ಗಳ ವಿಸ್ತರಣೆ UK ಅನ್ನು ಹಸಿರು ರಾಷ್ಟ್ರಗಳ ಸಾಲಿಗೆ ಸೇರಿಸಿದೆ.
10. ಜರ್ಮನಿ
ಪರಿಸರ ಸಂರಕ್ಷಣೆಯಲ್ಲಿ ನವೋದ್ಯಮ ಹಾಗೂ ನೀತಿ ರೂಪಿಸುವಿಕೆಯಲ್ಲಿ ಮುಂದಿರುವ ಈ ರಾಷ್ಟ್ರ, ಶುದ್ಧ ಇಂಧನ ಬಳಕೆ, ಬಹುಮಟ್ಟದ ಮರುಬಳಕೆ ಮತ್ತು ಕಠಿಣ ನಿಯಂತ್ರಣಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ.
Very good information… We the people and govt should involve in cleaning the house,kitchen, and roads.so that our environment will be tide and safe from pollution. The land is our asset, the water is our wealth, the trees are our breathing banks and forest is our treasurer…letus extend our hands to protect ing these valuable assets around us… With little efforts, our village, town,city will be enable to make healthy living placess and clean.
The land is our asset, the water is our wealth, the trees are our breathing banks, and forest is our treasurer. Let us protect these valuable assets around us and protect from pollution. We should extend our hands to protect the environment…so that our village, town, city will be able to shine on earth.