ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ ಟಾಪ್ 20 ಸಾರ್ಟ್ಪ್ ಇಕೋಸಿಸ್ಟಂ ನಗರಗಳ ಪಟ್ಟಿಯಲ್ಲಿ ಬೆಂಗಳೂರು 14ನೇ ಸ್ಥಾನ ಪಡೆದಿದೆ.
ಕಳೆದ ವರ್ಷ ಬೆಂಗಳೂರು 21ನೇ ಸ್ಥಾನದಲ್ಲಿತ್ತು. ಈ ಬಾರಿ ವಿಶ್ವದ ಟಾಪ್ 20 ಸ್ಟಾರ್ಟ್ಅಪ್ ನಗರಗಳಲ್ಲಿ ಬೆಂಗಳೂರು ಅತಿದೊಡ್ಡ ಜಿಗಿತ ದಾಖಲಿಸದಂತಾಗಿದೆ ಎಂದು ಸ್ಟಾರ್ಟ್ ಅಪ್ ಜಿನೋಮ್ನ ಗ್ಲೋಬಲ್ ಸ್ಟಾರ್ಟ್ಅಪ್ ಇಕೋಸಿಸ್ಟಂ ರಿಪೋರ್ಟ್ 2025ರ ವರದಿ ನೀಡಿದೆ.
ಈ ವರದಿಯಲ್ಲಿ ಸ್ಥಾನ ಪಡೆದ ಭಾರತೀಯ ನಗರಗಳಲ್ಲಿ, ಬೆಂಗಳೂರು ಅಗ್ರಸ್ಥಾನದಲ್ಲಿದೆ. ದೆಹಲಿ 29ನೇ ಸ್ಥಾನದಲ್ಲಿದೆ ಮತ್ತು ಮುಂಬೈ 40ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಟಾಪ್ 50 AI ನಗರಗಳಲ್ಲಿ ಬೆಂಗಳೂರು ಐದನೇ ಸ್ಥಾನ ಪಡೆದಿದೆ.