Live Poll | ಮಧ್ಯಪ್ರದೇಶದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ 28.15% ರಷ್ಟು ಮತದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶದ ಆರು ಸಂಸದೀಯ ಸ್ಥಾನಗಳಿಗೆ ನಡೆದ ಎರಡನೇ ಹಂತದ ಮತದಾನದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ 28.15 ರಷ್ಟು ಮತದಾನವಾಗಿದೆ.

ರಾಜ್ಯದಲ್ಲಿ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಟಿಕಮ್‌ಗಢ್ (ಎಸ್‌ಸಿ), ದಾಮೋಹ್, ಖಜುರಾಹೊ, ಸತ್ನಾ, ರೇವಾ ಮತ್ತು ಹೊಶಂಗಾಬಾದ್ ಎಂಬ ಆರು ಸಂಸದೀಯ ಸ್ಥಾನಗಳಿಗೆ ಮತದಾನ ಆರಂಭವಾಗಿದೆ.

ಇವುಗಳಲ್ಲಿ, ಹೋಶಂಗಾಬಾದ್ 32.40 ಶೇಕಡಾ ಮತದಾನದೊಂದಿಗೆ ಮುಂಚೂಣಿಯಲ್ಲಿದ್ದು, ಸತ್ನಾ 30.32 ಶೇಕಡಾ, ಖಜುರಾಹೊ ಶೇಕಡಾ 28.14, ಟಿಕಮ್‌ಗಡ್ ಶೇಕಡಾ 26.96, ದಾಮೋಹ್ 26.84 ಶೇಕಡಾ, ಮತ್ತು ರೇವಾ ಶೇಕಡಾ 24.46 ರಷ್ಟು ಮತದಾನವಾಗಿದೆ.

ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.30.46 ರಷ್ಟು ಮತದಾನ ನಡೆದಿದ್ದು, ಅಂತಿಮವಾಗಿ ಶೇ.67.08ರಷ್ಟು ಮತದಾನವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!