ಲಿವರ್‌ಗೆ ಹಾನಿಯಾಗೋಕೆ ಆಲ್ಕೋಹಾಲ್ ಕಾರಣ ಎನ್ನುವ ಭ್ರಾಂತಿಯಲ್ಲಿ ಬಹುತೇಕ ಜನರು ಸಿಲುಕಿದ್ದಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಮದ್ಯವಿಲ್ಲದೆಯೂ ಯಕೃತ್ತಿಗೆ ಹಾನಿ ಮಾಡುವ ಹಲವಾರು ಮಾರಕ ಪಾನೀಯಗಳು ನಮ್ಮ ದೈನಂದಿನ ಜೀವನದಲ್ಲಿ ನಿತ್ಯ ಬಳಸುತ್ತೇವೆ ಎಂಬುದನ್ನು ಸಾಕಷ್ಟು ಜನರು ಅರಿತಿಲ್ಲ. ಇದರ ಪರಿಣಾಮವಾಗಿ, ಇಂತಹ ಪಾನೀಯಗಳ ದುಷ್ಪರಿಣಾಮಗಳನ್ನು ಸಹ ಗಮನಿಸೋಕೆ ಆಗ್ತಿಲ್ಲ.
ಎನರ್ಜಿ ಡ್ರಿಂಕ್ಸ್: ಮಾರುಕಟ್ಟೆಯಲ್ಲಿ ಲಭ್ಯವಿರುವ ಎನರ್ಜಿ ಡ್ರಿಂಕ್ಸ್ ಗಳಲ್ಲಿ ಅಧಿಕ ಪ್ರಮಾಣದ ಕೆಫೀನ್ ಮತ್ತು ಸಕ್ಕರೆ ಇರುತ್ತದೆ. ಈ ಪಾನೀಯಗಳು ಯಕೃತ್ತಿನಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗುತ್ತವೆ.
ಸೋಡಾ ಮತ್ತು ತಂಪು ಪಾನೀಯಗಳು: ಇವುಗಳಲ್ಲಿ ಇರುವ ಫ್ರಕ್ಟೋಸ್ ಕಾರ್ನ್ ಸಿರಪ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಯಕೃತ್ತಿನಲ್ಲಿ ಉರಿಯೂತ ಉಂಟುಮಾಡುತ್ತದೆ.
ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್: ತಾಜಾ ಹಣ್ಣಿನ ರಸದಂತೆ ಕಂಡರೂ, ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ ಗಳಲ್ಲಿ ಹೆಚ್ಚಿನ ಪ್ರಿಸರ್ವೇಟಿವ್ ಮತ್ತು ಸಕ್ಕರೆ ಇರುತ್ತದೆ. ಇದು ಸಹ ಯಕೃತ್ತಿಗೆ ಹಾನಿಕಾರಕ.
ಮಿಲ್ಕ್‌ಶೇಕ್‌ಗಳು: ಮಾರುಕಟ್ಟೆಯಲ್ಲಿ ಸಿಗುವ ಶೇಕ್‌ಗಳಲ್ಲಿ ಹೆಚ್ಚಾದ ಸಕ್ಕರೆ, ಬಣ್ಣ ಮತ್ತು ಎಣ್ಣೆ ಇದ್ದು, ಇದು ಯಕೃತ್ತಿಗೆ ಒತ್ತಡ ನೀಡುತ್ತದೆ.
ಈ ಪಾನೀಯಗಳನ್ನು ನಿಯಮಿತವಾಗಿ ಸೇವಿಸುತ್ತಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ದೈಹಿಕ ಚಟುವಟಿಕೆ, ಸಮತೋಲನದ ಆಹಾರ ಮತ್ತು ತಾಜಾ ಸಸ್ಯಾಹಾರಿ ಪದಾರ್ಥಗಳ ಬಳಕೆ ಮೂಲಕ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವ ಪಾನೀಯವನ್ನು ಸೇವಿಸುತ್ತಿದ್ದೀರಿ ಎನ್ನುವುದು ಯಕೃತ್ತಿನ ಭವಿಷ್ಯವನ್ನು ನಿಖರವಾಗಿ ತೀರ್ಮಾನಿಸುತ್ತದೆ ಎಂಬುದು ಅನುಭವದಿಂದಲೇ ತಿಳಿಯುತ್ತದೆ.