ಸಾಲ ವಂಚನೆ ಪ್ರಕರಣ: ಉದ್ಯಮಿ ಅನಿಲ್ ಅಂಬಾನಿಗೆ ಇಡಿಯಿಂದ ಸಮನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಸಾಲ ವಂಚನೆ ಹಾಗೂ ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. ಈ ಕುರಿತು ಇಡಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸುತ್ತಿರುವ ಸಂದರ್ಭದಲ್ಲೇ, ಆಗಸ್ಟ್ 5 ರಂದು ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ಅನಿಲ್ ಅಂಬಾನಿ ಅವರ ಹೇಳಿಕೆ ದಾಖಲಿಸಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಡಿಯಿಂದ ನೀಡಿರುವ ಸಮನ್ಸ್‌ಗಳು ಇದೀಗ ಭಾರೀ ಗಮನಸೆಳೆದಿವೆ.

2017ರಿಂದ 2019ರ ಅವಧಿಯಲ್ಲಿ ಯೆಸ್ ಬ್ಯಾಂಕ್ ಅವರ ರಿಲಾಯನ್ಸ್ ಗ್ರೂಪ್‌ಗೆ ಸೇರಿದ ಕಂಪನಿಗಳಿಗೆ 3,000 ಕೋಟಿ ರೂಪಾಯಿ ಸಾಲ ನೀಡಿತ್ತು. ಈ ಹಣವನ್ನು ನಿಗದಿತ ಉದ್ದೇಶಕ್ಕೆ ಬಳಸದೇ ಬೇರೆ ಹೆಸರಿನಲ್ಲಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಹಣ ವರ್ಗಾವಣೆಗೆ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬ ಸುಳಿವುಗಳು ಇಡಿಗೆ ದೊರೆತಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಭುವನೇಶ್ವರ್ ಮತ್ತು ಕೋಲ್ಕತಾದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಕಲಿ ಬ್ಯಾಂಕ್ ಗ್ಯಾರಂಟಿ ಜಾಲವನ್ನು ಭೇದಿಸಲು ಇದು ಸಹಾಯಕವಾಗಲಿದೆ ಎಂಬ ನಿರೀಕ್ಷೆ ಇದೆ.

ಅಂಬಾನಿಯ ಹಲವಾರು ಕಂಪನಿಗಳಿಗೆ ಯೆಸ್ ಬ್ಯಾಂಕ್ ಮಾತ್ರವಲ್ಲದೇ ಇತರ ಕೆಲವು ಬ್ಯಾಂಕುಗಳು ಸಹ ರೀತಿಯಲ್ಲಿ ಸಾಲ ನೀಡಿದ್ದರೂ ಕೂಡ, ಹಣಕಾಸು ತಜ್ಞರ ಪರಿಶೀಲನೆ ಇಲ್ಲದೇ ಒಪ್ಪಿಗೆಯಾದ ಹಿನ್ನೆಲೆಯಲ್ಲಿ, ಈ ಸಂಪೂರ್ಣ ಪ್ರಕರಣ ಇಡಿ ತನಿಖೆಗೆ ಗುರಿಯಾಗುತ್ತಿದೆ.

ಅಂಬಾನಿ 20,000 ರಿಂದ 30,000 ಕೋಟಿ ರೂಪಾಯಿ ವಿದೇಶಕ್ಕೆ ಕಳಿಸಿದ್ದಾರೇ ಎಂಬ ಅನುಮಾನಗಳು ತೀವ್ರವಾಗಿದ್ದು, ಇಡಿಗೆ ಕೆಲವು ಪ್ರಮುಖ ದಾಖಲೆಗಳು ದೊರೆತಿರುವ ಸಾಧ್ಯತೆಯೂ ಇದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!