ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ಹೊರ ವಲಯದ ವಣಚಲುವಿನಲ್ಲಿರುವ ಫಾರ್ಮ್ ಹೌಸ್’ಗೆ ಲೋಕಾಯುಕ್ತ ದಾಳಿ ನಡೆದಿದೆ.
ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫ್ರೋಜ್ ಖಾನ್ ಎಂಬವರಿಗೆ ಸೇರಿದ್ದೆನ್ನಲಾದ ವಣಚಲುವಿನಲ್ಲಿರುವ ಫಾರ್ಮ್ ಹೌಸ್’ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಕೊಡಗಿನಲ್ಲೂ ಜಮೀರ್ ಸಂಬಂಧಿಕರು ಆಸ್ತಿ ಹೊಂದಿರುವ ಕುರಿತು ಪರಿಶೀಲನೆ ನಡೆಸಿದ್ದಾರೆ.
ವಣಚಲು ಗ್ರಾಮದ 7 ಎಕರೆ ಪ್ರದೇಶದಲ್ಲಿರುವ ಕಾಫಿ ತೋಟದಲ್ಲಿ ಫಾರ್ಮ್ ಹೌಸ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ದಾಳಿ ನಡೆದಿರುವುದು ಕುತೂಹಲಕ್ಕೆ ಎಡೆ ಮಾಡಿದೆ.
ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಫಾರ್ಮ್ ಹೌಸ್ ಮೇಲೆ ಲೋಕಾ ರೇಡ್

