ಸಂಚಾರ ನಿಯಮ ಉಲ್ಲಂಘಿಸುತ್ತಿದ್ದ 136 ನೀರಿನ ಟ್ಯಾಂಕರ್‌ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಬೆಂಗಳೂರು:

ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಸಂಚಾರ ನಿಮಯ ಉಲ್ಲಂಘಿಸುತ್ತಿದ್ದ 136 ನೀರಿನ‌ ಟ್ಯಾಂಕರ್ ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನೀರಿನ ಟ್ಯಾಂಕರ್ ವಾಹನಗಳ ಚಾಲಕರು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಾ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರ ದಟ್ಟಣೆ ಉಂಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹ ವಾಹನ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಸಂಚಾರ ದಕ್ಷಿಣ ವಿಭಾಗದ ಎಲ್ಲಾ ಪೊಲೀಸ್ ನಿರೀಕ್ಷಕರಿಗೆ ಸೂಚಿಸಲಾಗಿತ್ತು.

ಅದರಂತೆ 331 ವಾಹನಗಳ ತಪಾಸಣೆ ನಡೆಸಿದ ಪೊಲೀಸರು 136 ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ನಿಮಯ ಉಲ್ಲಂಘಿಸಿದ ಇತರೆ ವಾಹನಗಳ ವಿರುದ್ಧ 595 ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಿಸಿ 3,33,550 ರೂ. ದಂಡ ಸಂಗ್ರಹಿಸಿದ್ದಾರೆ.

ಸಮವಸ್ತ್ರ ಧರಿಸದೆ ಇರುವುದು, ಸೀಟ್ ಬೆಲ್ಟ್, ನೋ ಎಂಟ್ರಿಯಲ್ಲಿ ಸಂಚಾರ, ದೋಷಪೂರಿತ ನಂಬರ್ ಪ್ಲೇಟ್, ನೋ ಪಾರ್ಕಿಂಗ್, ಫುಟ್ ಪಾತ್ ಪಾರ್ಕಿಂಗ್, ಕರ್ಕಶ ಹಾರ್ನ್, ಡ್ರಂಕ್ ಅಂಡ್ ಡ್ರೈವ್ ಸೇರಿದಂತೆ 595 ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!