ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಬ್ಬರು ಮಹಿಳೆಯರು ಒಂದೇ ಒಂದು ನಿಮಿಷ ತಡವಾಗಿ ವಂದೇ ಭಾರತ್ ರೈಲಿನ ಬಳಿ ಬಂದಿದ್ದು, ರೈಲು ನಿಲ್ಲಿಸಿ ಎಂದು ಕೈ ಮುಗಿದು ಬೇಡಿದ್ದಾರೆ. ಮಾನವೀಯತೆಯಿಂದ ಲೋಕೋ ಪೈಲಟ್ ನಿಧಾನ ಮಾಡಿ ಹತ್ತಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ತಡವಾದಾಗ ಕಣ್ಣೆದುರೇ ರೈಲು ತಪ್ಪಿಸಿಕೊಳ್ಳುವ ಪರಿಸ್ಥಿತಿ ಬಂದರೆ ಯಾರಿಗೂ ಆತಂಕವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಇದೇ ರೀತಿಯ ಒಂದು ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಅದರಲ್ಲಿ ಇಬ್ಬರು ಮಹಿಳೆಯರು ತಮ್ಮ ಭಾರವಾದ ಸಾಮಾನುಗಳೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾರೆ. ರೈಲು ಚಲಿಸಲು ಆರಂಭವಾದಾಗ, ಅವರು ಅಸಹಾಯಕರಾಗಿ ಲೋಕೋ ಪೈಲಟ್ ಕಡೆಗೆ ಕೈಜೋಡಿಸಿ ಪ್ಲೀಸ್-ಪ್ಲೀಸ್ ಎಂದು ಬೇಡಿಕೊಳ್ಳುತ್ತಾರೆ.
ವಂದೇ ಭಾರತ್ ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟು ವೇಗ ಪಡೆಯುತ್ತಿದ್ದಾಗ, ಇಬ್ಬರು ಮಹಿಳೆಯರು ತಮ್ಮ ಸಾಮಾನುಗಳೊಂದಿಗೆ ಅಲ್ಲಿ ತಲುಪಿ ಕೈಜೋಡಿಸಿ ರೈಲನ್ನು ನಿಲ್ಲಿಸಲು ಲೋಕೋ ಪೈಲಟ್‌ಗೆ ವಿನಂತಿ ಮಾಡಿಕೊಂಡರು. ಅವರ ಅಸಹಾಯ ಸ್ಥಿತಿ ಕಂಡು ಪೈಲಟ್‌ನ ಮನಸ್ಸು ಕರಗಿ ಓಡುತ್ತಿದ್ದ ರೈಲನ್ನು ನಿಧಾನಗೊಳಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಪರ ಹಾಗೂ ವಿರೋಧ ಚರ್ಚೆ ಕೂಡ ಆಗುತ್ತಿದೆ.



