ಲೋಕಸಭಾ ಚುನಾವಣೆ: ನಾನು ಸ್ಪರ್ಧಾಕಾಂಕ್ಷಿ ಎಂದ ವೀರಣ್ಣ ಹಳೇಗೌಡ

ಹೊಸದಿಗಂತ, ಬಾಗಲಕೋಟೆ :

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಆಸಕ್ತನಾಗಿದ್ದು, ಈ ಬಗ್ಗೆ ಅವಕಾಶ ನೀಡಲು ಜಿಲ್ಲೆಯ ಬಿಜೆಪಿ ಶಾಸಕರು, ಮಾಜಿ ಶಾಸಕರು, ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ‌ ಅವರಿಗ ಮನವಿ ಸಲ್ಲಿಸಿದ್ದೇನೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಅಧ್ಯಕ್ಷ ವೀರಣ್ಣ ಹಳೇಗೌಡರ ಹೇಳಿದರು.

ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಪಕ್ಷದ ಹಿರಿಯರ ಮಾರ್ಗ ದರ್ಶನದಲ್ಲಿ ಎರಡು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ೭ ಜಿಲ್ಲಾಕಾರ್ಯಕಾರಿಣಿ ಸಭೆ ನಡೆಸಿದ್ದೇನೆ. ನರೇಂದ್ರ ಮೋದಿ ಅವರ ಅವಧಿಯಲ್ಲಿ ಜಿಲ್ಲಾ ಹಿಂದುಳಿದ‌ಮೋರ್ಚಾ ಅಧ್ಯಕ್ಷ ಕೆಲಸ ತೃಪ್ತಿ ತಂದಿದೆ. ಮೋದಿ ಅವತಾರ ಪುರುಷ ಆಗಿದ್ದಾರೆ ಎಂದರು.

ಗದ್ದಿಗೌಡರನ ತಪ್ಪಿಸಿ ನನಗೆ ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ‌ ,‌ಗದ್ದಿಗೌಡರ ತಪ್ಪಿಸಿ ಕೊಡುಬೇಕು ಎಂದು ಹೇಳಲ್ಲ.. ಪಕ್ಷದ ಹೈ ಕಮಾಂಡ ಏನಾದರೂ ಬದಲಿಸಿದರೆ ನನಗೆ ಟಿಕೆಟ್ ನೀಡಬೇಕು ಎಂದರು. ಈಗಾಗಲೇ ಜಿಲ್ಲೆಯ ನಾಯಕರು ಕೂಡ ಗದ್ದಿಗೌಡರಿಗೆ ಟಿಕೆಟ್ ಹೈ ಕಮಾಂಡ್ ನೀಡದೇ ಬೇರೆಯವರಿಗೆ ಟಿಕೆಟ್ ಕೊಡುವ ವಿಚಾರ ಬಂದಾಗ ನನಗೆ ಟಿಕೆಟ್ ನೀಡಲು ನಾಯಕರು ಹೇಳುವುದಾಗಿ ಹೇಳಿದ್ದಾರೆ ಎಂದರು.

ಗದ್ದಿಗೌಡರ ಕೂಡ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ‌. ಪ್ರಚಾರ ಪ್ರಿಯರಲ್ಲ. ರೈಲ್ವೆ ಯೋಜನೆ ಸೇರಿ ದಂತೆ ಹಲವು ಯೋಜನೆ ಕೇಂದ್ರದಿಂದ ಜಿಲ್ಲೆಗೆ ತಂದಿದ್ದಾರೆ. ‌ಅವರು ಕೆಲಸ‌ ಮಾಡಿದ ಪರಿಣಾಮವೇ ಅವರನ್ನು ನಾಲ್ಕು ಬಾರಿ ಆಯ್ಕೆ ಜನ ಮಾಡಿದ್ದಾರೆ ಎಂದರು. ಸಂಗಮೇಶ ಹೂಗಾರ,ಕೋನ ಆಡಗಲ್, ಸುಭಾಸ ರಾಮೋಡಗಿ ಚಂದ್ರಪ್ಪ‌ ನಕ್ಕರಗುಂದಿ, ಶೇಖರ ಚವ್ಹಾಣ ಪತ್ರಿಕಾಗೋಷ್ಠಿಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!