ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ರಣರಂಗದ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಬಿಜೆಪಿಯು ಅಸ್ಸಾಂನಲ್ಲಿ 11 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಮೂರು ಸ್ಥಾನಗಳನ್ನು ತನ್ನ ಮಿತ್ರಪಕ್ಷಗಳಾದ ಅಸ್ಸಾಂ ಗಣ ಪರಿಷತ್‌ನ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್‌ಗೆ (ಯುಪಿಪಿಎಲ್) ಬಿಟ್ಟುಕೊಟ್ಟಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ.
ಎಜಿಪಿಯು ಬರ್ಪೇಟ ಮತ್ತು ಧುಬ್ರಿಯಲ್ಲಿ ಸ್ಪರ್ಧಿಸಲಿದೆ. ಯುಪಿಪಿಎಲ್ ಕೊಕ್ರಝಾರ್‌ನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಅಸ್ಸಾಂ ಎಲ್ಲಾ 14 ಸ್ಥಾನಗಳಲ್ಲೂ ಎನ್‌ಡಿಎ ಮಿತ್ರಪಕ್ಷಗಳು ಪರಸ್ಪರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿವೆ ಎಂದು ಶರ್ಮಾ ಅವರು ಹೇಳಿದರು.
‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಜೊತೆ ನಾನು ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಭಾಬೇಶ್ ಕಲಿತಾ ಬುಧವಾರ ಸಭೆ ನಡೆಸಿದೆವು. ಆಗ ಸ್ಥಾನಹಂಚಿಕೆ ಕುರಿತು ಚರ್ಚೆ ನಡೆಸಿದೆವು. ಸ್ಪರ್ಧಿಸುತ್ತಿರುವ 11 ಸ್ಥಾನಗಳಲ್ಲೂ ಬಿಜೆಪಿ ಜಯ ಸಾಧಿಸುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ಶರ್ಮಾ ಹೇಳಿದರು.