ಹೊಸದಿಗಂತ ಡಿಜಿಟಲ್ ಡೆಸ್ಕ್:
58 ಲೋಕಸಭಾ ಕ್ಷೇತ್ರಗಳಿಗೆ ನಡೆದ ಆರನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ 49.2 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹಂಚಿಕೊಂಡ ಅಂಕಿಅಂಶಗಳು ತಿಳಿಸಿವೆ.
ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಮತದಾನ (ಶೇ. 70.19), ಜಾರ್ಖಂಡ್ (ಶೇ. 54.34), ಉತ್ತರ ಪ್ರದೇಶ (ಶೇ. 43.95), ಒಡಿಶಾ (ಶೇ. 48.44), ಜಮ್ಮು ಮತ್ತು ಕಾಶ್ಮೀರ (ಶೇ. 44.41) , ಬಿಹಾರ (ಶೇ. 45.21), ಹರಿಯಾಣ (ಶೇ. 46.26), ಮತ್ತು ದೆಹಲಿ (ಶೇ. 44.58).
ಆರನೇ ಹಂತದ ಲೋಕಸಭೆ ಚುನಾವಣೆಯು ಬಿಹಾರದಲ್ಲಿ ಎಂಟು ಸ್ಥಾನಗಳು, ಹರಿಯಾಣದ ಎಲ್ಲಾ 10 ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸ್ಥಾನ, ಜಾರ್ಖಂಡ್ನಲ್ಲಿ 4, ದೆಹಲಿಯ ಎಲ್ಲಾ ಏಳು ಸ್ಥಾನಗಳು, ಒಡಿಶಾದಲ್ಲಿ 6, ಉತ್ತರ ಪ್ರದೇಶದಲ್ಲಿ 14 ಮತ್ತು ಪಶ್ಚಿಮ ಬಂಗಾಳದಲ್ಲಿ 8 ಸ್ಥಾನಗಳನ್ನು ಒಳಗೊಂಡಿದೆ. ಒಟ್ಟು 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ.