ಲೋಕಸಭೆ ಭದ್ರತಾ ಲೋಪ- ಸಭಾಧ್ಯಕ್ಷ ಪೀಠದಲ್ಲಿದ್ದವರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರು ಕಲಾಪ ನಡೆಸುತ್ತಿದ್ದ ಜಾಗಕ್ಕೆ ಜಿಗಿದು ಆತಂಕ ಸೃಷ್ಟಿಸಿದ್ದಾರೆ.

ಈ ಬಗ್ಗೆ ಸಭಾಧ್ಯಕ್ಷ ಪೀಠದಲ್ಲಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್‌ವಾಲ್ ಮಾತನಾಡಿದ್ದಾರೆ.

ಮೊದಲ ವ್ಯಕ್ತಿ ಕೆಳಗೆ ಬಿದ್ದಾಗ, ಮಿಸ್ ಆಗಿ ಬಿದ್ದಿದ್ದಾರೆ ಎಂದುಕೊಂಡೆವು ಆದರೆ ಎರಡನೇ ವ್ಯಕ್ತಿಯೂ ಅದೇ ರೀತಿ ಬಿದ್ದಾಗ ನಾವೆಲ್ಲರೂ ಎಚ್ಚರಗೊಂಡೆವು. ಬೂಟುಗಳನ್ನು ಆ ವ್ಯಕ್ತಿ ತೆಗೆಯಲು ಯತ್ನಿಸಿದ. ಆದರೆ ಆತ ಬಗ್ಗಿ ಹೊಗೆಯನ್ನು ಸ್ಪ್ರೇ ಮಾಡಿದ್ದ. ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ, ಸಭಾಧ್ಯಕ್ಷರು ಹಾಗೂ ಉನ್ನತ ಸ್ಥಾನದಲ್ಲಿರುವವರು ಯಾವ ವಿರ್ಧಾರ ಮಾಡುತ್ತಾರೆ ನೋಡಬೇಕಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸದನಕ್ಕೆ ಆಗಮಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!