ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಾ.ಮಂಜುನಾಥ್ (Dr.Manjunath) ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ (R.Ashok) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಆರ್.ಅಶೋಕ್, ಮಂಜುನಾಥ್ ಅವರಿಗೆ ನಮ್ಮಿಂದ ಟಿಕೆಟ್ ಕೊಡಬೇಕು ಅನ್ನುವ ಬಗ್ಗೆ ನಮ್ಮ ಪಕ್ಷದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ. ಸೀಟು ಹೊಂದಾಣಿಕೆ ಸೂತ್ರ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಡಾ.ಮಂಜುನಾಥ್ ಇನ್ನೂ ಯಾವ ಪಕ್ಷಕ್ಕೂ ಸೇರಿದವರಲ್ಲ. ಅವರು ಜೆಡಿಎಸ್‌ಗೆ ಸೇರ್ತಾರೋ ಬಿಜೆಪಿಗೆ ಸೇರ್ತಾರೋ ಅಂತ ನೋಡಬೇಕು. ಅವರಿಗೆ ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ನಿರ್ಣಯ ಮಾಡಲಿದೆ. ನಮ್ಮ ಕೇಂದ್ರದ ನಾಯಕರು ಎಲ್ಲ ಕಡೆ ಎರಡು ಸರ್ವೆ ಮಾಡಿದ್ದಾರೆ. ಅದರಲ್ಲಿ ಯಾರ ಹೆಸರು ಬರುತ್ತೋ ನೋಡಬೇಕು ಎಂದು ಹೇಳಿದ್ದಾರೆ.