ದಿಗಂತ ವರದಿ ಕಲಬುರಗಿ:
ಬೆಳ್ಳಂಬೆಳಗ್ಗೆ ಬೆಂಗಳೂರಿನ ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಾಗಿ ಅವರ ಕಲಬುರಗಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಕಲಬುರಗಿ ನಗರದ ಎಂಬಿ ನಗರದಲ್ಲಿರುವ ಬೆಂಗಳೂರು ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಾಗಿ ಮನೆಗೆ ಲೋಕಾಯುಕ್ತ ಅಧೀಕ್ಷಕ ಎಸ್.ಪಿ.ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಬೆಂಗಳೂರು ಹಾಗೂ ಕಲಬುರಗಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಆಸ್ತಿ ಪಾಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಾಗಿ ಅವರು ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಮಾಡಿರುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕ್ಯಾಸಿನೋ ಕಾಯಿನ್ಸ್ ಪತ್ತೆ: ಬಿಬಿಎಂಪಿ ಸಹಾಯಕ ಆಯುಕ್ತ ಬಸವರಾಜ ಮಾಗಿ ಅವರ ಕಲಬುರಗಿ ನಗರದ ಎಂಬಿ ನಗರದ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಹಿನ್ನೆಲೆ,ದಾಳಿ ವೇಳೆ ಕ್ಯಾಸಿನೋ ಕಾಯಿನ್ಸ್ ಗಳು ಪತ್ತೆಯಾಗಿವೆ.
12.50 ಲಕ್ಷದ ಕ್ಯಾಸಿನೋ ಕಾಯಿನ್ಸ್ ಗಳು ಪತ್ತೆಯಾಗಿದ್ದು, ಜೊತೆಗೆ ಕ್ಯಾಸಿನೋ ಸದಸ್ಯತ್ವದ ಕಾರ್ಡ್ ಕೂಡಾ ದಾಳಿ ಪತ್ತೆಯಾಗಿದೆ.