September 25, 2026
Friday, September 25, 2026
spot_img

ಪಡಿತರ ಅಕ್ಕಿ ಕಳ್ಳಾಟಕ್ಕೆ ‘ಲೋಕಾ’ ಶಾಕ್: ಗೋದಾಮುಗಳಲ್ಲಿ ಭಾರಿ ಗೋಲ್‌ಮಾಲ್ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ವಿತರಣೆಯಲ್ಲಿ ಅಕ್ರಮ ನಡೆಯುತ್ತಿರುವ ಆರೋಪಗಳ ನಡುವೆ ಲೋಕಾಯುಕ್ತ ಪೊಲೀಸರು ಬೆಂಗಳೂರಿನ ವಿವಿಧ ಆಹಾರ ಗೋದಾಮುಗಳ ಮೇಲೆ ದಿಢೀರ್ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆಹಚ್ಚಿದ್ದಾರೆ.

27 ಗೋದಾಮುಗಳ ಮೇಲೆ ಏಕಕಾಲದ ದಾಳಿ

ನಗರ ಮತ್ತು ಗ್ರಾಮಾಂತರ ಸೇರಿ ಒಟ್ಟು 27 ಗೋದಾಮುಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆ ವೇಳೆ ಹಲವು ಗೋದಾಮುಗಳಲ್ಲಿ ದಾಖಲೆಗಳಲ್ಲಿನ ಲೆಕ್ಕ ಹಾಗೂ ನೈಜ ದಾಸ್ತಾನು ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ.

ಇದನ್ನೂ ಓದಿ:

ಉತ್ತರ ನೀಡಲು ವಿಫಲ

ಕೆಲವೆಡೆ ಸಾವಿರಾರು ಅಕ್ಕಿ ಚೀಲಗಳ ಲೆಕ್ಕ ಸರಿಹೊಂದದೇ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ವಿಫಲರಾದರು. ಕೆಲವು ಗೋದಾಮುಗಳಲ್ಲಿ ಉಸ್ತುವಾರಿ ಅಧಿಕಾರಿಗಳ ಗೈರುಹಾಜರಿಯೂ ಬೆಳಕಿಗೆ ಬಂದಿದೆ.

ಇದರ ಜೊತೆಗೆ ಹಮಾಲಿ ಕಾರ್ಮಿಕರಿಗೆ ಜೀವ ವಿಮೆ, ಇಎಸ್‌ಐ ಮತ್ತು ಪಿಎಫ್‌ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ಶೋಷಣೆ ಮಾಡಲಾಗುತ್ತಿರುವುದು ದಾಳಿಯ ವೇಳೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Must Read