ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಲೋಕಃ: ಚಾಪ್ಟರ್ 1-ಚಂದ್ರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ ನಂತರ, ಇದೀಗ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಗ್ಗೆ ಇಡಲಿದೆ. 30 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿತವಾಗಿರುವ ಈ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಚಿತ್ರ ಪ್ರೇಕ್ಷಕರಿಗೆ ರೋಮಾಂಚಕ ಕಥಾಹಂದರ, ಸಾಹಸ ದೃಶ್ಯಗಳು ಹಾಗೂ ಅನಿರೀಕ್ಷಿತ ತಿರುವುಗಳನ್ನು ನೀಡಿದ್ದು, ಅದರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಲೋಕಃ: ಚಾಪ್ಟರ್ 1-ಚಂದ್ರ’ ಸಿನಿಮಾದ ನಿರ್ದೇಶಕ ಡೊಮಿನಿಕ್ ಆಗಿದ್ದು, ಕಲ್ಯಾಣಿ ಪ್ರಿಯದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ‘ಪ್ರೇಮುಲು’ ಖ್ಯಾತಿಯ ನಸ್ಲೆನ್, ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ, ವಿಜಯರಾಘವನ್, ಸಂಧು ಸಲೀಂಕುಮಾರ್, ರಘುನಂದ ಪಲೇರಿ, ಶಿವಜಿತ್ ಪದ್ಮನಾಭನ್ ಮತ್ತು ಜೈನ್ ಆಂಡ್ರ್ಯೂಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದುಲ್ಕರ್ ಸಲ್ಮಾನ್, ಟುವಿನೋ ಥಾಮಸ್ ಮತ್ತು ಸೌಬಿನ್ ಶಾಹಿರ್ ಅತಿಥಿ ಪಾತ್ರಗಳಲ್ಲಿ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಘಟನಾವಳಿಗಳು ಬೆಂಗಳೂರಿನಲ್ಲಿಯೇ ನಡೆಯುತ್ತವೆ ಎಂಬುದು ವಿಶೇಷ.
ಈ ಬ್ಲಾಕ್‌ಬಸ್ಟರ್ ಸಿನಿಮಾ ದೀಪಾವಳಿ ಉಡುಗೊರೆಯಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಲಿದೆ. ಮಲಯಾಳಂ, ಕನ್ನಡ ಮತ್ತು ಇತರೆ ಭಾಷೆಗಳಲ್ಲಿಯೂ ಪ್ರದರ್ಶನವಾಗಲಿದೆ.