ಹೊಸದಿಗಂತ ವರದಿ, ಹಾವೇರಿ:
ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದ ಉಪಖಜಾನೆ ಕಚೇರಿಯ ಮೇಲೆ ಸೋಮವಾರ ಸಂಜೆ ಹಾವೇರಿಯ ಲೋಕಾಯುಕ್ತರು ದಾಳಿ ಮಾಡಿ ಲಂಚ ಸ್ವೀಕಾರ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಿದರು.
ತಾಲ್ಲೂಕಿನ ಹಳ್ಳೂರ ಗ್ರಾಮದ ಪಶು ವೈದ್ಯಾಧಿಕಾರಿ ಡಾ. ಅಮೃತರಾಜ ನೀಡಿದ ದೂರಿನನ್ವಯ ಲೋಕಾಯುಕ್ತರು ದಾಳಿ ನಡೆಸಿದರು. ೧೨೦೦ ರೂ ಸ್ವೀಕರಿಸುವ ವೇಳೆ ದಾಳಿ ನಡೆಸಲಾಗಿದೆ. ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಡೇಮನಿ, ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಇವರಿಬ್ಬರ ವಿಚಾರಣೆ ನಡೆಸಲಾಗಿದೆ.
ಯಾವುದೇ ಬಿಲ್ ಪಾಸು ಮಾಡಲು ಲಂಚ ಕೇಳುತ್ತಿದ್ದು ಇದರಿಂದ ಬೇಸತ್ತು ಅಮೃತರಾಜ ಹಾವೇರಿ ಲೋಕಾಯುಕ್ತರಿಗೆ ದೂರು ನೀಡಿದ್ದು ದೂರಿನ ಅನ್ವಯ ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ, ಇನ್ಸಪೆಕ್ಟರ್ ಮುಸ್ತಾಕ ಅಹ್ಮದ ಮತ್ತು ಸಿಬ್ಬಂದಿ ವರ್ಗ ದಾಳಿ ನಡೆಸಿದರು. ಘಟನೆಗೆ ಸಂಬoಧಿಸಿದoತೆ ಹಾವೇರಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.