ಹೊಸದಿಗಂತ ವರದಿ ಕೊಪ್ಪಳ:
ಸಮಾಜ ಕಲ್ಯಾಣ ಇಲಾಖೆಯಲ್ಲಿ ಬುಧವಾರ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಪಡೆಯುತ್ತಿದ್ದ ಅಧಿಕಾರಿಯನ್ನು ಬಲೆಗೆ ಬೀಳಿಸಿದ್ದಾರೆ.
ದೇವದಾಸಿಯರ ಮಕ್ಕಳನ್ನು ಮದುವೆಯಾದ ದಂಪತಿಗೆ ಸರ್ಕಾರದಿಂದ 5 ಲಕ್ಷ ರೂ. ಮಂಜೂರು ಆಗಿತ್ತು. ಈ ಹಣ ಬಿಡುಗಡೆ ಮಾಡಬೇಕಾದರೆ, ಎಸ್ ಡಿಎ ಅಧಿಕಾರಿ ವೆಂಕಟೇಶ್ ಎಂಬಾತ ದಂಪತಿಗೆ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇಷ್ಟೊಂದು ಹಣ ನಮ್ಮಲ್ಲಿ ಇಲ್ಲ ಎಂದು ದಂಪತಿ ಅಧಿಕಾರಿಗೆ ತಿಳಿಸಿದ್ದರು. ಅಧಿಕಾರಿ ವೆಂಕಟೇಶ್ ಮುಂಗಡವಾಗಿ 5 ಸಾವಿರ ರೂ. ನೀಡಿ, ಉಳಿದ ಹಣ ಚೆಕ್ ಪಡೆದ ಬಳಿಕ ನೀಡಿ ಎಂದಿದ್ದರು. ದಂಪತಿ ಹಣ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.