ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್.ಪಾಟೀಲ್, ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ದಿಢೀರ್ ಭೇಟಿ ನೀಡಿದ್ದಾರೆ.
ಈ ವೇಳೆ ವ್ಯಕ್ತಿಯೋರ್ವ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದ್ದ ಫೋಟೊ ತೋರಿಸಿ, ಯಾಕೆ ಟ್ರೀಟ್ಮೆಂಟ್ ನೀಡಿಲ್ಲ, ಏನು ಮಾಡ್ತಾ ಇದ್ದೀರಾ? ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಆಸ್ಪತ್ರೆಯ ಇಂಚಿಂಚು ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಾಧೀಶರು, ಡೆಂಗ್ಯೂ ವಾರ್ಡ್, ಟ್ರಾಮಾ ಹಾಗೂ ಎಮರ್ಜೆನ್ಸಿ ಸೆಂಟರ್‌ಗೆ ಭೇಟಿ ನೀಡಿ ವಿಶೇಷ ಅಧಿಕಾರಿ ಬಾಲಾಜಿ ಪೈ ಅವರಿಂದ ಮಾಹಿತಿ ಪಡೆದರು.
ಬಳಿಕ ಮೆಡಿಸಿನ್ ಸ್ಟೋರ್‌ಗೆ ಭೇಟಿ ನೀಡಿದ ಲೋಕಾಯುಕ್ತರು ಮೆಡಿಸಿನ್ ಲಭ್ಯತೆ ಹಾಗೂ ಅಲಭ್ಯತೆ ಕುರಿತು ಮಾಹಿತಿ ಪಡೆದರು. ಈ ವೇಳೆ ಮೆಡಿಷನ್ ಎಕ್ಸ್ಪೇರಿ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ ಲೋಕಾಯುಕ್ತರಾದ ಬಿಎಸ್ ಪಾಟೀಲ್, ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಸರಪ್ರೈಸ್ ವಿಸಿಟ್ ಮಾಡಿದ್ದೇವೆ. ಈ ವೇಳೆ ಆಸ್ಪತ್ರೆ ಆವರಣದಲ್ಲಿ ರೋಗಿಯೊಬ್ಬ ನರಳಾಡ್ತಾ ಬಿದ್ದಿದ್ರೂ ಯಾರೂ ಚಿಕಿತ್ಸೆ ನೀಡಿಲ್ಲ. ರೋಗಿಗಳಿ ಚಿಕಿತ್ಸೆ ಸರಿಯಾಗ ನೀಡದೆ, ವೈದ್ಯರು ಸ್ಪಂದಿಸದ ಹಿನ್ನೆಲೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದರು.
ರೋಗಿಗಳಿಗೆ ಕೊಟ್ಟ ಮೆಡಿಸಿನ್ ರಿಜಿಸ್ಟ್ರರ್‌ನಲ್ಲಿ ಎಂಟ್ರಿ ಆಗ್ತಿರಲಿಲ್ಲ. ಮೂರು ಜನ ಡಾಟಾ ಎಂಟ್ರಿ ಅಪರೇಟರ್ ನೇಮಕ ಮಾಡಿಕೊಂಡಿದ್ದಾರೆ. ಎಮರ್ಜೆನ್ಸಿ ಮೆಡಿಸಿನ್ ಕೇಳಿದ್ರೆ ಇಲ್ಲ ಅಂತಿದ್ದಾರೆ. ಕಾಂಟ್ರಾಕ್ಟರ್ ಬಿಲ್ ಪೆಂಡಿಂಗ್ ಇರೋದ್ರಿಂದ ಸಪ್ಲೇ ಮಾಡಿಲ್ಲ ಎಂದಿದ್ದಾರೆ. ಇನ್ನು ಓಪಿಡಿಯಲ್ಲಿ ಎಲ್ಲ ಡಾಕ್ಟರ್ ಗೈರಾಗಿರುವುದು ಕಂಡುಬಂತು. ಅವರ ಬದಲು ಪಿಜಿ ಡಾಕ್ಟರ್ ಇದ್ದರು. ಸೂಪರಿಡೇಂಟ್ ಕರೆಸಿದ್ವಿ ಕೆಲವರು ಬಂದರು. ಇನ್ನು ಕೆಲವರು ರಜೆಯಲ್ಲಿದ್ದೇವೆ ಅಂದಿದ್ದಾರೆ. ರೋಗಿಗಳಿಗೆ ಗೈಡ್ ಮಾಡ್ತಾ ಇರಲಿಲ್ಲ. ರೋಗಿಗಳಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ವೈದ್ಯರು ಬೇಜವಾಬ್ದಾರಿತನ ತೋರದೇ ರೋಗಿಗಳೊಂದಿಗೆ ಸ್ಪಂದಿಸಿ ಚಿಕಿತ್ಸೆ ನೀಡಬೇಕು. ಯಾರೂ ಚಿಕಿತ್ಸೆ ವಂಚಿತರಾಗಿ ರಸ್ತೆಯಲ್ಲಿ ನರಳಾಡುವಂತಾಗಬಾರದು ಎಂದರು.
Sir pl visit bowring hospital room number 8 ART DEPARTMENT, AND ALSO HIV BLOOD TEST ROOM IN INSIDE THE ROOM VERY DIRTY, MOSQUITO NO HYGIENE INSIDE THE ROOM