ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಂಗ್ ಹಿಡಿದು ರೀಲ್ಸ್ ಮಾಡಿ ಎಡವಟ್ಟು ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ರಜತ್, ವಿನಯ್ಗೆ ಸಂಕಷ್ಟ ಎದುರಾಗಿದೆ. ನಿನ್ನೆ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ಮಾಡಿ ಬಿಡುಗಡೆ ಮಾಡಿದ್ದರು. ಇದೀಗ ರಜತ್ ಹಾಗೂ ವಿನಯ್ ಗೌಡ ಇಬ್ಬರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಇಂದು ಮತ್ತೆ ವಶಕ್ಕೆ ಪಡೆದಿದ್ದಾರೆ.
ಕೆಲವು ಅನುಮಾನಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಪೊಲೀಸರ ಸೂಚನೆಯ ಮೇರೆಗೆ ರಜತ್ ಹಾಗೂ ವಿನಯ್ ಇಬ್ಬರು ಒಂದೇ ಕಾರಿನಲ್ಲಿ ಬಸವೇಶ್ವರನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆದಿದ್ದು, ಸೀಜ್ ಮಾಡಿರೋ ವೆಪನ್ ಬಗ್ಗೆ ಪೊಲೀಸರು ರಜತ್ ಹಾಗೂ ವಿನಯ್ಗೆ ಫುಲ್ ಡ್ರಿಲ್ ಮಾಡಿದ್ದಾರೆ.
ಜಪ್ತಿ ಮಾಡಿರೋ ಲಾಂಗ್ಗೂ ರೀಲ್ಸ್ನಲ್ಲಿರೋ ಲಾಂಗ್ಗೂ ವ್ಯತ್ಯಾಸ ಕಂಡು ಬಂದಿದೆ. ಪೊಲೀಸ್ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಅನುಮಾನದ ಮೇಲೆ ಇದೀಗ ತನಿಖೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ವಿನಯ್ ಹಾಗೂ ರಜತ್ಗೆ ಪೊಲೀಸರು ಆಯುಧದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ರಜತ್ ಅವರು ಅದು ಸೆಟ್ ಪ್ರಾಪರ್ಟಿ ಎಂದಿದ್ದಾರೆ. ಹಾಗಿದ್ರೆ ಒರಿಜಿನಲ್ ವೆಪನ್ ಯಾವುದು ಅನ್ನೋ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ರೀಲ್ಸ್ನಲ್ಲಿರೋ ಲಾಂಗ್ ಹಾಗೂ ಸೀಜ್ ಮಾಡಿರೋ ಲಾಂಗ್ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.