ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ್ದಾಗಿದೆ. ಈ ಬಗ್ಗೆ ವರಿಷ್ಠರ ಜೊತೆ ಚರ್ಚೆ ನಡೆಸಲು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ತೆರಳಿದ್ದರು.
ಇದೀಗ ದೆಹಲಿಯಿಂದ ಎಚ್‌ಡಿಕೆ ವಾಪಾಸಾಗಿದ್ದು, ಗೃಹ ಸಚಿವ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಅವರ ಜೊತೆ ಸೌಹಾರ್ದಯುತ ಚರ್ಚೆ ನಡೆದಿದೆ. ಮೈತ್ರಿ ಸಂಬಂಧ ಒಂದು ದೀರ್ಘಾವಧಿ ಸಂಬಂಧ ಆಗಬೇಕಿದೆ. ಆ ನಿಟ್ಟಿನಲ್ಲಿ ಮಾತುಕತೆ ಕೇಂದ್ರೀಕೃತವಾಗಿತ್ತು ಎಂದಿದ್ದಾರೆ.
ಸೀಟು ಹಂಚಿಕೆ ವಿಚಾರವಾಗಿ ಯಾವುದೇ ಗೊಂದಲ ಇಲ್ಲ, ನಮ್ಮನಮ್ಮಲ್ಲಿ ಮಾತುಕತೆಗಳಾಗಿದೆ. ಅದನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದೆ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತನಿಗೆ ಕಾವೇರಿ ನೀರು ಇರದಂಥ ಪರಿಸ್ಥಿತಿ ಬಂದಿದೆ. ಈ ಸಮಸ್ಯೆಗೆ ಮೊದಲು ಪರಿಹಾರ ಸಿಗಲಿ. ಸದ್ಯಕ್ಕೆ ನಮ್ಮೆಲ್ಲರ ಗಮನ ರೈತರ ಮೇಲಿದೆ ಎಂದಿದ್ದಾರೆ.