ಇಡ್ಲಿ, ದೋಸೆ, ಪುಲಾವ್ ಎಲ್ಲವನ್ನೂ ಬಿಟ್ಟಿಟ್ಟು ಕೆಲವೊಮ್ಮೆ ಬಾಯಿಗೆ ಒರಿಜಿನಲ್ ಸ್ಟೈಲ್ ಕ್ರಿಸ್ಪಿ ಸ್ನ್ಯಾಕ್ಸ್ ಬೇಕಾಗುತ್ತೆ ಅಲ್ಲವೇ? ಅಂಥ ಸಮಯಕ್ಕೆ ಇದೊಂದು ಪರ್ಫೆಕ್ಟ್ ರೆಸಿಪಿ – ಕ್ರಿಸ್ಪಿ ಕಾರ್ನ್ ಕಬಾಬ್. ಇತ್ತೀಚೆಗೆ ಪಾರ್ಟಿಗಳಲ್ಲಿ, ಸ್ಟ್ರೀಟ್ ಫುಡ್ ಸ್ಟಾಲ್ಗಳಲ್ಲಿ ಬಲು ಫೇಮಸ್ ಆಗಿರುವ ಈ ಐಟಂ ಈಗ ನಿಮ್ಮ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾಗಿದೆ.
ಬೇಕಾಗುವ ಪದಾರ್ಥಗಳು
1 ಕಪ್ ಸಿಹಿ ಕಾರ್ನ್
2 ಚಮಚ ಕ್ಯಾರೆಟ್ , ತುರಿದ
2 ಚಮಚ ಕ್ಯಾಪ್ಸಿಕಂ , ಕತ್ತರಿಸಿದ್ದು
½ ಈರುಳ್ಳಿ , ಸಣ್ಣಗೆ ಹೆಚ್ಚಿದ
2 ಚಮಚ ಕೊತ್ತಂಬರಿ ಸೊಪ್ಪು , ಕತ್ತರಿಸಿದ್ದು
¼ ಟೀಸ್ಪೂನ್ ಅರಿಶಿನ
½ ಟೀಸ್ಪೂನ್ ಮೆಣಸಿನ ಪುಡಿ
½ ಟೀಸ್ಪೂನ್ ಕೊತ್ತಂಬರಿ ಪುಡಿ
½ ಟೀಸ್ಪೂನ್ ಜೀರಿಗೆ ಪುಡಿ
½ ಟೀಸ್ಪೂನ್ ಉಪ್ಪು
2 ಆಲೂಗಡ್ಡೆ , ಬೇಯಿಸಿದ
¼ ಕಪ್ ಬ್ರೆಡ್ ಕ್ರಂಬ್ಸ್
2 ಚಮಚ ಜೋಳದ ಹಿಟ್ಟು
ಹುರಿಯಲು ಎಣ್ಣೆ
ಮಾಡುವ ವಿಧಾನ
ಮೊದಲನೆಯದಾಗಿ, ಮಿಕ್ಸರ್ ಜಾರ್ನಲ್ಲಿ ಸಿಹಿ ಜೋಳವನ್ನು ತೆಗೆದುಕೊಂಡು, ತರಿತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ ಅದಕ್ಕೆ ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಹಾಗೂ ಆಲೂಗಡ್ಡೆ, ಬ್ರೆಡ್ ಕ್ರಂಬ್ಸ್ ಮತ್ತು 2 ಚಮಚ ಕಾರ್ನ್ ಹಿಟ್ಟು ಸೇರಿಸಿ. ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಲ್ಲಾ ಮಸಾಲೆಗಳು ಚೆನ್ನಾಗಿ ಬೆರೆತಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಈಗ ಕೈಗಳಿಗೆ ಎಣ್ಣೆ ಹಚ್ಚಿ, ಕಬಾಬ್ ಆಕಾರ ಮಾಡಿ, ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಕಬಾಬ್ ಚಿನ್ನದ ಕಂದು ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಫ್ರೈ ಮಾಡಿದರೆ ಕ್ರಿಸ್ಪಿ ಕಾರ್ನ್ ಕಬಾಬ್ ರೆಡಿ.