CINE| ಪುಷ್ಪ-2 ಸೆಟ್‌ನಿಂದ ಮತ್ತೊಂದು ವಿಡಿಯೋ ಲೀಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ, ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ‘ಪುಷ್ಪ 2’ಸಿನಿಮಾದ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ರಾಷ್ಟ್ರಪ್ರಶಸ್ತಿ ಪಡೆದಿರುವುದರಿಂದ ಎರಡನೇ ಭಾಗಕ್ಕೆ ರಾಷ್ಟ್ರವ್ಯಾಪಿ ನಿರೀಕ್ಷೆಗಳಿವೆ. ಸದ್ಯ ಈ ಸಿನಿಮಾದ ವಿಡಿಯೋವೊಂದು ಲೀಕ್ ಆಗಿದೆ. ಆ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಲೇ ಬೇಕು.

ಪುಷ್ಪ 2ರಲ್ಲಿ ಅದ್ಧೂರಿ ಲಾರಿ ಆ್ಯಕ್ಷನ್ ಸೀಕ್ವೆನ್ಸ್ ಇರಲಿದೆ ಎಂಬುದು ಗೊತ್ತೇ ಇದೆ. ಲಾರಿಯ ಹಲವು ಸೀಕ್ವೆನ್ಸ್‌ಗಳು ಈಗಾಗಲೇ ಸೆಟ್‌ಗಳಿಂದ ಸೋರಿಕೆಯಾಗಿವೆ. ಇತ್ತೀಚೆಗೆ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಆ ವಿಡಿಯೋದಲ್ಲಿ 100ಕ್ಕೂ ಹೆಚ್ಚು ಲಾರಿಗಳು ಕಾಣಿಸುತ್ತಿವೆ. ಈ ವೀಡಿಯೋ ನೋಡಿದರೆ ಸುಕುಮಾರ್ ಎರಡನೇ ಭಾಗದಲ್ಲಿ ಅದ್ಧೂರಿ ಸಾಹಸ ದೃಶ್ಯಗಳನ್ನು ಪ್ಲಾನ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ಎರಡನೇ ಭಾಗದಲ್ಲಿ ಅದ್ಧೂರಿ ಸಾಹಸ ದೃಶ್ಯಗಳು ಇರಲಿವೆ ಎಂಬುದು ಖಚಿತವಾಗಿದೆ.

ಈ ಸಿನಿಮಾದಲ್ಲಿ ಫಹದ್ ಫಾಸಿಲ್ ಮುಖ್ಯ ಖಳನಾಯಕನಾಗಿ ಕಾಣಿಸಿಕೊಂಡರೆ, ಸುನೀಲ್, ಅನಸೂಯ, ಧನಂಜಯ್, ಜಗದೀಶ್ ಮುಂತಾದವರು ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಈ ಸಿನಿಮಾವನ್ನು ತೆರೆಗೆ ತರಲು ಮುಂದಾಗಿದ್ದಾರೆ ಎಂದು ಚಿತ್ರ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!