ಹೊಸ ದಿಗಂತ ವರದಿ, ಅಂಕೋಲಾ:
ಲಾರಿ ಮತ್ತು ಕಂಟೇನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡೂ ಲಾರಿಗಳ ಚಾಲಕರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ವಜ್ರಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ಮಹಾರಾಷ್ಟ್ರದಿಂದ ಕೇರಳಕ್ಕೆ ಆಯಿಲ್ ಸಾಗಿಸುತ್ತಿದ್ದ ಎಂ.ಎಚ್ 09 ಸಿ.ಯು8195 ನೋಂದಣಿ ಸಂಖ್ಯೆಯ ಲಾರಿಗೆ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಸಾಗುತ್ತಿದ್ದ ಲಾರಿ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಯಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು , ಆಯಿಲ್ ಲೋಡ್ ಲಾರಿ ಚಾಲಕ ಕೋಲಾಪುರದ ಕರವೀರ ನಿವಾಸಿ ಜಮೀರ ಬಾಬಾಸಾಹೆಬ ಪಠಾಣ(48) ಹೊಟ್ಟೆ ಮತ್ತು ಬೆನ್ನಿನ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಂಟೇನರ್ ಲಾರಿ ಚಾಲಕ ಬೆಳಗಾವಿ ಕಿತ್ತೂರು ನಿವಾಸಿ ಶ್ರೀಕಾಂತ ಬಸಪ್ಪ ಮಾತಾರೆ (27)ಎನ್ನುವವರಿಗೆ ಬಲಕಾಲು ಮತ್ತು ಬೆನ್ನಿಗೆ ಗಾಯಗಳಾಗಿವೆ.
ಕಂಟೇನರ್ ಲಾರಿ ಚಾಲಕನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.