LORRY STRIKE | ರಸ್ತೆಗಿಳಿಯದ ಲಾರಿ, ಟ್ರಕ್‌; ಯಾವ ಸೇವೆ ಇದೆ? ಯಾವ ಸೇವೆ ಇಲ್ಲ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿದೆ.

ಹೆದ್ದಾರಿಗಳ ಪಕ್ಕ, ಮಾರುಕಟ್ಟೆ, ಯಶವಂತಪುರದ ಟ್ರಕ್ ಟರ್ಮಿನಲ್​ನಲ್ಲಿ ಲಾರಿಗಳು ಸಾಲು ಸಾಲಾಗಿ ನಿಂತಿದ್ದು, ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ. ಮಾರುಕಟ್ಟೆ ಮತ್ತಿತರ ಸ್ಥಳಗಳಿಗೆ ಅಗತ್ಯವಸ್ತುಗಳು, ಎಲೆಕ್ಟ್ರಾನಿಕ್ಸ್, ಗೂಡ್ಸ್ ಸಾಗಾಟ ಮಾಡುವ ಸುಮಾರು 6 ಲಕ್ಷ ಲಾರಿಗಳು ರಾಜ್ಯಾದ್ಯಂತ ಸಂಚಾರ ಸ್ಥಗಿತಗೊಳಿಸಿವೆ.

ಏರ್‌ಪೋರ್ಟ್ ಟ್ಯಾಕ್ಸಿ, ಫೈರ್ ಸರ್ವಿಸ್ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಿಲ್ಲ. ಹಾಲು, ಔಷಧ, ತರಕಾರಿ, ಹಣ್ಣಿನ ಸಾಗಾಟ ಇರಲಿದೆ. ಅಕ್ಕಿ ಸಾಗಾಟ 50-50 ಎನ್ನಲಾಗಿದೆ. ಮೆಡಿಕಲ್ ಶಾಪ್, ಆಸ್ಪತ್ರೆ, ಆಂಬ್ಯುಲೆನ್ಸ್​ ಸೇವೆಗಳಲ್ಲಿ ವ್ಯತ್ಯಯವಿಲ್ಲ.

ಡೊಮೆಸ್ಟಿಕ್ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ. ಧವಸ ಧಾನ್ಯ, ಸರಕು ಸಾಗಾಟದ ವಾಹನಗಳ ಸಂಚಾರದಲ್ಲಿ ವ್ಯತ್ಯಯ. ಅರ್ಥ್ ಮೂವಿಂಗ್, ಬೋರ್‌ವೆಲ್ ವಾಹನಗಳ ಲಭ್ಯತೆಯಲ್ಲಿ ವ್ಯತ್ಯಯ. ಪೆಟ್ರೋಲಿಯಂ ಮತ್ತಿತರ ಇಂಧನ ಉತ್ಪನ್ನಗಳ ಸಾಗಾಟದಲ್ಲಿ ವ್ಯತ್ಯಯವಾಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!