ಹೊಸದಿಗಂತ ವರದಿ,ಕಾರವಾರ:
ಒಂದೇ ಕುಟುಂಬದ ಮೂವರ ಮೃತದೇಹ ಕಾರವಾರ ಮತ್ತು ಗೋವಾ ಕುಕಳ್ಳಿ ಭಾಗದಲ್ಲಿ ಪತ್ತೆಯಾಗಿದ್ದು ಉದ್ಧಿಮೆಯಲ್ಲಿ ನಷ್ಟ ಅನುಭವಿಸಿದ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಗೋವಾ ವೆರ್ನಾ ನಿವಾಸಿ ಶ್ಯಾಮ ಪಾಟೀಲ್ (40) ಅವರ ಪತ್ನಿ ಜ್ಯೋತಿ ಪಾಟೀಲ್ (37) ಮಗ ದಕ್ಷ ಪಾಟೀಲ್ (12) ಮೃತ ದುರ್ದೈವಿಗಳಾಗಿದ್ದು ಶ್ಯಾಮ ಇಂಡಸ್ಟ್ರಿಯಲ್ ಕಂಪನಿ ಎಂಬ ಉದ್ದಿಮೆ ನಡೆಸುತ್ತಿದ್ದ ಶ್ಯಾಮ ಪಟೇಲ್ ಕೋಟ್ಯಾಂತರ ರೂಪಾಯಿ ನಷ್ಟದಲ್ಲಿದ್ದ ಹಣ ಹೂಡಿಕೆ ಮಾಡಿದ ಕೆಲವು ಕಡೆಗಳಲ್ಲಿ ಸಹ ನಷ್ಟ ಸಂಭವಿಸಿತ್ತು.
ಕುಟುಂಬ ಸಮೇತ ಕಾರವಾರಕ್ಕೆ ಆಗಮಿಸಿ ಪತ್ನಿ ಜ್ಯೋತಿ ಪಾಟೀಲ್ ಮತ್ತು ಮಗ ದಕ್ಷ ಕೋಡಿಬಾಗ ಸೇತುವೆಯಿಂದ ಕಾಳಿ ನದಿಯಲ್ಲಿ ಜಿಗಿದಿದ್ದು ಶ್ಯಾಮ್ ಪಾಟೀಲ್ ಕುಕಳ್ಳಿ ವ್ಯಾಪ್ತಿಯ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಾಳಿ ನದಿಯಲ್ಲಿ ಜಿಗಿದವರ ಮೃತ ದೇಶಗಳು ಕಾರವಾರ ದೇವಭಾಗ ಕಡಲ ತೀರದಲ್ಲಿ ಪತ್ತೆಯಾಗಿದ್ದು ಮೊದಲು ಬಾಲಕನ ಮೃತ ದೇಹ ಕಂಡು ಬಂದಿದ್ದು ಸ್ವಲ್ಪ ದೂರದಲ್ಲಿ ಜ್ಯೋತಿ ಅವರ ಮೃತ ದೇಹ ಕಂಡು ಬಂದಿದೆ ಚಿತ್ತಾಕುಲ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಶ್ಯಾಮ್ ಅವರ ಮೃತ ದೇಹ ಗೋವಾದಲ್ಲಿ ದೊರಕಿದ ಕುರಿತು ಕುಕಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.