ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕೆ ಬಲುಜಾಣೆ, ಯುಪಿಎಸ್‌ಸಿ ಪರೀಕ್ಷೆಗೆ ನಾಲ್ಕು ವರ್ಷಗಳಿಂದ ತಯಾರಿ ನಡೆಸುತ್ತಲೇ ಇದ್ದಳು.. ಆದರೆ ಕಡೆಗೆ ರೂಮಿನಲ್ಲಿ ಹೆಣವಾಗಿ ಪತ್ತೆಯಾಗಿದ್ದಳು..
ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದ ಪುಷ್ಪಾ ಕಿರಣ್ ಜೊತೆ ಪ್ರೀತಿಯಲ್ಲಿದ್ದಳು. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರು. ಪ್ರೀತಿಯಲ್ಲಿದ್ದಾಗ ಜಾತಿಯ ತೊಂದರೆ ಆಗಿರಲಿಲ್ಲ. ಪುಷ್ಪಾ ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ನಡೆದಿದೆ.
ನಂತರ ಕಳೆದ ಕೆಲ ದಿನಗಳಿಂದ ಪುಷ್ಪಾ ತನ್ನ ಪ್ರಿಯಕರ ಕಿರಣ್ಗೆ ಮದುವೆ ಮಾಡಿಕೋ ಎಂದು ಒತ್ತಾಯ ಮಾಡ್ತಿದ್ದರು. ಆದರೆ ಪುಷ್ಪಾ ಹಾಗೂ ಕಿರಣ್ಗೆ ಜಾತಿ ವಿಚಾರ ಅಡ್ಡ ಬಂದಿತ್ತು. ಅನ್ಯ ಜಾತಿ ಹಿನ್ನೆಲೆ ಯುವತಿ ಮದುವೆಗೆ ಕಿರಣ್ ಮನೆಯವರು ನಿರಾಕರಿಸಿದ್ದರು. ಹೀಗಾಗಿ ಕಿರಣ್ ಕೂಡ ಈಗಲೇ ಮದುವೆ ಬೇಡವೆಂದು ಪುಷ್ಪಾಗೆ ಸಮಾಧಾನ ಮಾಡಿದ್ದ. ಆದರೆ ಇದರಿಂದ ಮನನೊಂದ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.