ಆನ್‌ಲೈನ್ ನಲ್ಲೇ ಶುರುವಾಯಿತು ಪ್ರೀತಿ: ಯುವಕನ ಅರಸಿ ಅಮೆರಿಕದಿಂದ ಭಾರತಕ್ಕೆ ಓಡೋಡಿ ಬಂದ ಯುವತಿ!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಇಂಟರ್ನೆಟ್ ಯುಗದಲ್ಲಿ ಯಾರಿಗೆ, ಯಾರ ಮೇಲೆ ಲವ್​ ಆಗುತ್ತೆ ಅಂತ ಹೇಳೋದು ಕಷ್ಟ. ಯಾರಿಗೆ, ಯಾರ ಮೇಲೆ, ಯಾವಾಗ, ಹೇಗೆ ಬೇಕಾದ್ರೂ ಲವ್​ ಆಗಿ ಬಿಡಬಹುದು.

ಇದಕ್ಕೆ ಸಾಕ್ಷಿ ಎಂಬಂತೆಆನ್‌ಲೈನ್‌ನಲ್ಲಿ ಆಂಧ್ರ ಮೂಲದ ಯುವಕನ ಪ್ರೇಮಕ್ಕೆ ಮರುಳಾದ ಅಮೆರಿಕನ್ ಯುವತಿಯೊಬ್ಬಳು ಆತನಿಗಾಗಿದ ದೇಶ ಬಿಟ್ಟು ಬಂದಂತಹ ಅಚ್ಚರಿಯ ಘಟನೆ ಅಂಧ್ರಪ್ರದೇಶದಿಂದ ವರದಿಯಾಗಿದೆ.

ಹೌದು ಮೂಲತಹ ಫೋಟೋಗ್ರಾಫರ್​ ಜಾಕ್ಲಿನ್ ಫೊರೆರೊ ಹಾಗೂ ಚಂದನ್ ಇಬ್ಬರು ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಲವ್​ ಮಾಡಲು ಶುರು ಮಾಡಿಕೊಂಡಿದ್ದರು.

ಹಾಯ್ ಎಂಬ ಸಂದೇಶದಿಂದ ಶುರುವಾದ ಪ್ರೀತಿ ಈಗ ಮದುವೆ ಆಗುವ ತನಕ ಬಂದು ನಿಂತಿದೆ. ಈ ಬಗ್ಗೆ ಖುದ್ದು ಅಮೆರಿಕಾದ ಫೋಟೋಗ್ರಾಫರ್​ ಜಾಕ್ಲಿನ್ ಫೊರೆರೊ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಫೊರೆರೊ 14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊoಡಿದ್ದಾರೆ.

ಕೇವಲ 45 ಸೆಕೆಂಡುಗಳ ಕ್ಲಿಪ್‌ನಲ್ಲಿ ಈ ಇಬ್ಬರ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗೆ ಮರೆಯಲಾರದ ಬಂಧವಾಗ ಬದಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಈ ಇಬ್ಬರು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!