February 3, 2026
Tuesday, February 3, 2026
spot_img

LOVE | ಪ್ರೀತಿಯಲ್ಲಿ ಕಾಲದ ಗಡಿಗಳನ್ನು ದಾಟಿದ ಫೇಮಸ್ ಲವ್ ಸ್ಟೋರಿಗಳಿವು..!

ಪ್ರೀತಿ ಯಾವ ದಿನ ಹುಟ್ಟುತ್ತದೆ, ಯಾರ ಹೃದಯದಲ್ಲಿ ಅರಳುತ್ತದೆ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ಅದು ಋತುವಿನಂತೆ ಬಂದು ಹೋಗುವ ಭಾವನೆಯಲ್ಲ; ಕಾಲಕಾಲಕ್ಕೂ ಮಾನವ ಬದುಕನ್ನು ರೂಪಿಸಿರುವ ಶಕ್ತಿ. ಇಂದಿನ ಯುವ ಪ್ರೇಮಿಗಳನ್ನು ನೋಡಿ “ನಮ್ಮ ಕಾಲ ಚೆನ್ನಾಗಿತ್ತು” ಎನ್ನುವವರು ಇದ್ದಾರೆ, ಈಗಿನ ಪ್ರೀತಿ ಚನ್ನಾಗಿದೆ ಅಂತ ಹೇಳುವವರೂ ಇದ್ದಾರೆ. ಪ್ರೀತಿ ಹೊಸದಾಗಿ ಹುಟ್ಟಿದ ಭಾವನೆಯೇ ಅಲ್ಲ. ಪುರಾಣದಿಂದ ಹಿಡಿದು ಅರಮನೆಗಳವರೆಗೆ, ಸಾಹಿತ್ಯದಿಂದ ಇತಿಹಾಸದ ಪುಟಗಳವರೆಗೆ ಪ್ರೀತಿ ತನ್ನ ಗುರುತು ಬಿಟ್ಟಿದೆ. ಕೆಲವರು ಪ್ರೀತಿಗಾಗಿ ಇತಿಹಾಸವಾಗಿದ್ದರೆ, ಇನ್ನೂ ಕೆಲವರು ಅದೇ ಪ್ರೀತಿಯಲ್ಲಿ ಸೋತು ಕಥೆಯಾಗಿದ್ದಾರೆ. ಇಲ್ಲಿವೆ ಕಾಲಾತೀತವಾಗಿ ಉಳಿದ ಅಮರ ಪ್ರೇಮ ಕಥೆಗಳ ನೆನಪುಗಳು.

ದುಷ್ಯಂತ – ಶಕುಂತಲಾ

ಪ್ರೀತಿಯ ಆರಂಭ ಮಧುರವಾದರೂ, ಮರೆವೆಯೇ ದುರಂತವಾದ ಕಥೆ ಇದು. ದುಷ್ಯಂತನ ಮರೆವಿನಿಂದ ಶಕುಂತಲಾ ಅನುಭವಿಸಿದ ನೋವು, ಸಹನೆ ಮತ್ತು ಅಂತಿಮ ಮಿಲನ ಇಂದಿಗೂ ಮನಸ್ಸನ್ನು ತಟ್ಟುವ ಪೌರಾಣಿಕ ಪ್ರೇಮಗಾಥೆ.

ಷಹಜಹಾನ್ – ಮುಮ್ತಾಜ್

ಮರಣವೂ ಪ್ರೀತಿಯನ್ನು ಮರೆಸಲಿಲ್ಲ ಎಂಬುದಕ್ಕೆ ತಾಜ್ ಮಹಲ್ ಸಾಕ್ಷಿ. ಮುಮ್ತಾಜ್‌ಗಾಗಿ ಷಹಜಹಾನ್ ಕಟ್ಟಿಸಿದ ಈ ಸ್ಮಾರಕ ಪ್ರೀತಿಯ ಶಾಶ್ವತ ಚಿಹ್ನೆಯಾಗಿದೆ.

ರಾಣಿ ವಿಕ್ಟೋರಿಯಾ – ರಾಜ ಆಲ್ಬರ್ಟ್

ರಾಜಕೀಯಕ್ಕಿಂತ ಮೀರಿದ ದಾಂಪತ್ಯ ಪ್ರೀತಿ. ವಿಕ್ಟೋರಿಯಾ ತಮ್ಮ ಡೈರಿಗಳಲ್ಲಿ ದಾಖಲಿಸಿದ ಪ್ರೇಮಕಥೆ, ಅಧಿಕಾರದ ನಡುವೆಯೂ ಭಾವನೆ ಜೀವಂತವಾಗಿರಬಹುದೆಂದು ಹೇಳುತ್ತದೆ.

ನೆಪೋಲಿಯನ್ – ಜೋಸೆಫೈನ್

ಕ್ರೂರ ಆಡಳಿತಗಾರನ ಹೃದಯದಲ್ಲೂ ಪ್ರೀತಿ ಇತ್ತು. ಮಕ್ಕಳಿಲ್ಲದ ಕಾರಣ ದೂರವಾದರೂ, ಅವರ ನಡುವಿನ ಪ್ರೀತಿ ಇತಿಹಾಸದಲ್ಲಿ ಉಳಿದಿದೆ.

ಕ್ಲಿಯೋಪಾತ್ರಾ – ಮಾರ್ಕ್ ಆಂಟೆನಿ

ಶಕ್ತಿ, ರಾಜಕಾರಣ ಮತ್ತು ಪ್ರೀತಿ ಎಲ್ಲವೂ ಒಂದೇ ವೇದಿಕೆಯಲ್ಲಿ. ಶೇಕ್ಸ್‌ಪಿಯರ್ ಅವರ ಕಥನದಿಂದ ಇವರ ಪ್ರೇಮ ಇನ್ನಷ್ಟು ಅಮರವಾಗಿದೆ.

ರೋಮಿಯೋ – ಜೂಲಿಯೆಟ್

ಪ್ರೀತಿಯ ಪರಾಕಾಷ್ಠೆ ಮತ್ತು ದುರಂತದ ಗಡಿ ಒಂದೇ ರೇಖೆಯಲ್ಲಿ ಉಳಿದಿದೆ. ಜೀವ ತ್ಯಾಗಕ್ಕೂ ಹೆದರದ ಪ್ರೇಮದ ಪ್ರತೀಕ.

ಸಲೀಂ – ಅನಾರ್ಕಲಿ

ಅರಮನೆಯ ನಿಯಮಗಳಿಗೆ ಸಿಕ್ಕು ನುಚ್ಚುನೂರಾದ ಪ್ರೀತಿ. ಜೀವಂತ ಸಮಾಧಿಯಲ್ಲೂ ಮೌನವಾಗಿ ಕೂಗಿದ ಪ್ರೇಮಗಾಥೆ.

ಪ್ರೀತಿ ಗೆಲ್ಲಬಹುದು, ಸೋಲಬಹುದು ಆದರೆ ಕಥೆಯಾಗಿ ಉಳಿಯುವುದು ಖಚಿತ.ಕಾಲ ಬದಲಾಗುತ್ತದೆ, ಹೆಸರುಗಳು ಬದಲಾಗುತ್ತವೆ; ಆದರೆ ಪ್ರೀತಿಯ ಭಾವನೆ ಮಾತ್ರ ಅಜರಾಮರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !