ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ…….? ಫೋನ್ ಇಲ್ಲದೆ ಇರೋ ಆಗಿನ ಕಾಲದ ಪ್ರೀತಿ ಹೇಗಿತ್ತು? ನಿಮಗೂ ಕುತೂಹಲ ಇದ್ಯಾ?

ಇವತ್ತು ಲವ್ ಮಾಡೋದು ಸುಲಭ. ಮೆಸೇಜ್ ಹಾಕೋದು, ಸ್ಟೋರಿ ರಿಪ್ಲೈ ಕೊಡೋದು, ಮತ್ತೆ ವಿಡಿಯೋ ಕಾಲ್ ಮಾಡೋದು – ಎಲ್ಲವೂ ಕೇವಲ ಸೆಕೆಂಡ್‌ಗಳ ಆಟ. ಆದರೆ ಹಳೇ ಕಾಲದ ಪ್ರೀತಿ ಹಾಗಲ್ಲ ಅಲ್ಲ. ಅದು ಪಕ್ಕಾ ಎಮೋಷನಲ್. ತಾಳ್ಮೆ ಇರುತ್ತಿತ್ತು, ಮೌನ ಇರುತ್ತಿತ್ತು, ಹಾಗೆ ಮನಸು ತುಂಬಿದ ಭಾವನೆ ಇರುತಿತ್ತು.

ಅಂದು ಕಣ್ಣಿನ ನೋಟದಲ್ಲಿ, ಮೌನದಲ್ಲಿ ಅರಳ್ತಿದ್ದ ಪ್ರೀತಿ. ಇಂದು ಎಷ್ಟು ಕಾಡಿ ಬೇಡಿದ್ರು ಬರಲ್ಲ. ನಿಜಾ ಹೇಳ್ಬೇಕಂದ್ರೆ, ಆಗ ಪ್ರೀತಿ ಹೇಳೋಕೆ ಎಷ್ಟೋ ಬಾರಿ ಮಾತುಗಳ ಅವಶ್ಯಕತೆಯೇ ಇರಲಿಲ್ಲ. ಒಂದು ನಗು, ಒಂದು ನೋಟ, ಒಂದು ತುಂಟ ಭಾವನೆ ಸಾಕಾಗುತ್ತಿತ್ತು ಹೃದಯ ಮುಟ್ಟೋಕೆ. ಆಗಿನ ಕಾಲದಲ್ಲಿ ಪತ್ರ ಬರೆಯೋದು ಸಾಮಾನ್ಯ. ಆದರೆ ಆ ಪತ್ರದಲ್ಲಿರೋ ಅಕ್ಷರಗಳಲ್ಲಿ ಪ್ರೀತಿ ತುಂಬಿರ್ತಿತ್ತು. ಆ ಪತ್ರ ಬಂದು ಓದುವ ಕ್ಷಣ… ಅಯ್ಯೋ, ಅದೇ ಸ್ವರ್ಗ ಅಂತ ಅನಿಸ್ತಿತ್ತು! ಉತ್ತರ ಬರೋಕೆ ವಾರ, ತಿಂಗಳು ಕಳೆಯುತ್ತಿದ್ದರೂ ತಾಳ್ಮೆಯಿಂದ ಕಾಯೋದು ಪ್ರೀತಿಯ ಒಂದು ಭಾಗನೇ ಆಗಿತ್ತು.

ಪ್ರೀತಿನಲ್ಲಿ ಶಿಸ್ತಿತ್ತು, ಗೌರವ ಇತ್ತು. ಮಾತಿನಲ್ಲಿ ಭಯವಿತ್ತು. ದೂರ ಇದ್ದರೂ ಹತ್ತಿರವಾಗಿರೋ ಭಾವನೆ, ಕಡಿಮೆ ಭೇಟಿಯಾದ್ರೂ ಆಕೆಯ ನೆನಪಲ್ಲಿ ಬದುಕೋ ಶ್ರದ್ಧೆ ಇತ್ತು. ಅವತ್ತು ಸಾಮಾಜಿಕ ಮಾಧ್ಯಮ ಇರ್ಲಿಲ್ಲ, ಶೇರ್ ಮಾಡೋ ಫೋಟೋಗಳು ಇರ್ಲಿಲ್ಲ, ಆದರೆ ಪ್ರೀತಿಯ ನೆನಪುಗಳೇ ಇಡೀ ಜೀವನಕ್ಕೆ ಉಳಿಯುತ್ತಿತ್ತು.

ಹೇಳ್ಬೇಕಂದ್ರೆ, ಹಳೇ ಕಾಲದ ಪ್ರೀತಿ ಒಂದು ಪವಿತ್ರ ಭಾವನೆ. ಅದು ವೇಗದ ಪ್ರಪಂಚದಲ್ಲಿ ನಿಧಾನವಾಗಿ ಕರಗಿ ಹೋಗುತ್ತಿದೆ. ಮನಸ್ಸನ್ನು ಮುಟ್ಟುವಷ್ಟು ಆಳವಿದ್ದ ಅಂಥ ಪ್ರೀತಿ ಈಗ ಹಾಡಿನಲ್ಲಿ, ಕಥೆಯಲ್ಲಿ, ಒಮ್ಮೆ ಓದಿದ ಪತ್ರದಲ್ಲಿ ಕಾಣ್ತಾ ಇದ್ದೀವಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!