ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೂ ಬಾಳಿ ಬದುಕಬೇಕಿದ್ದ ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರಪ್ರದೇಶದ ಮೋರ್ಚಾ ಗ್ರಾಮದಲ್ಲಿ ಕೊಠಡಿಯೊಂದರಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
22 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿ ಶಿವಕುಮಾರ್ ಪಕ್ಕದ ಮನೆಯ 17 ವರ್ಷದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಮನೆಯವರಿಗೆ ತಿಳಿದಿದ್ದು, ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.
ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ನಮ್ಮನ್ನು ದೂರ ಮಾಡಬೇಡಿ, ಯಾರನ್ನೂ ದೂಷಿಸಬೇಡಿ. ಇಬ್ಬರ ಅಂತ್ಯಕ್ರಿಯೆ ಒಟ್ಟಿಗೇ ಮಾಡಿ ಸಾವಿನಲ್ಲಾದರೂ ಒಂದಾಗಲು ಬಿಡಿ ಎಂದು ಬರೆದಿದ್ದಾರೆ.