Low BP | ಲೋ ಬಿಪಿ ಅಪಾಯಕಾರಿಯೇ? ಇದನ್ನು ಆಹಾರದಿಂದ ನಿಯಂತ್ರಿಸುವ ಸರಳ ಮಾರ್ಗಗಳಿವು!

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ ಸಮಸ್ಯೆ ಹೆಚ್ಚುತ್ತಿರುವಂತೆಯೇ, ಲೋ ಬಿಪಿಯ ಪ್ರಕರಣಗಳೂ ಹೆಚ್ಚುತ್ತಿರುವುದನ್ನು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾಮಾನ್ಯವಾಗಿ ಜನರು ಹೈ ಬಿಪಿ ಅಪಾಯಕಾರಿ ಆದರೆ ಲೋ ಬಿಪಿ ತೊಂದರೆ ತರೋದಿಲ್ಲ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು. ಲೋ ಬಿಪಿಯೂ ಕೂಡಾ ದೇಹಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವೈದ್ಯರು ಹೇಳುತ್ತಾರೆ.

ಲೋ ಬಿಪಿ ಎಂದರೇನು?

ಸಾಮಾನ್ಯ ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡ 120/80 mmHg ಇರಬೇಕು. ಅದು 90/60 mmHg ಅಥವಾ ಅದಕ್ಕಿಂತ ಕಡಿಮೆ ಆಗಿದ್ದರೆ, ಅದನ್ನು ಲೋ ಬಿಪಿ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ತಲೆ ತಿರುಗುವುದು, ಮೂರ್ಛೆ ಹೋಗುವುದು, ಎದೆ ನೋವು, ದೃಷ್ಟಿ ಮಸುಕಾಗುವುದು, ಕಿಡ್ನಿ ತೊಂದರೆ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಾಣಿಸಬಹುದು.

ಯಾವ ಆಹಾರ ಸಹಾಯಕ?

ಆರೋಗ್ಯ ತಜ್ಞರ ಪ್ರಕಾರ, ಲೋ ಬಿಪಿಯನ್ನು ನಿಯಂತ್ರಿಸಲು ಕೆಲವು ಆಹಾರಗಳು ಬಹಳ ಪರಿಣಾಮಕಾರಿ.

ಒಣದ್ರಾಕ್ಷಿ: ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ಸೇವಿಸಿದರೆ ರಕ್ತದೊತ್ತಡ ಸಾಮಾನ್ಯವಾಗಲು ಸಹಕಾರಿಯಾಗುತ್ತದೆ.

ಬೀಟ್‌ರೂಟ್: ನೈಟ್ರೇಟ್ ಸಮೃದ್ಧವಾಗಿರುವ ಬೀಟ್‌ರೂಟ್ ರಕ್ತನಾಳಗಳನ್ನು ಹಿಗ್ಗಿಸಿ ಪರಿಚಲನೆ ಸುಧಾರಿಸುತ್ತದೆ.

ಹಾಲು ಹಾಗೂ ಬಾದಾಮಿ: ನಿಯಮಿತವಾಗಿ ಸೇವಿಸಿದರೆ ಬಿಪಿ ನಿಯಂತ್ರಣಕ್ಕೆ ಸಹಕಾರ.

ಉಪ್ಪು: ತಕ್ಷಣದ ಪರಿಹಾರಕ್ಕಾಗಿ ಸ್ವಲ್ಪ ಉಪ್ಪಿನೊಂದಿಗೆ ನಿಂಬೆ ರಸ ಸೇವಿಸಬಹುದು.

ನೀರು: ದಿನಕ್ಕೆ 8–10 ಗ್ಲಾಸ್ ನೀರು ಕುಡಿಯುವುದರಿಂದ ನಿರ್ಜಲೀಕರಣ ತಡೆಯಬಹುದು.

ಬೆಳ್ಳುಳ್ಳಿ: ರಕ್ತನಾಳಗಳನ್ನು ಸಡಿಲಗೊಳಿಸುವುದರಿಂದ ಬಿಪಿ ಸಮತೋಲನ ಸಾಧಿಸಲು ನೆರವಾಗುತ್ತದೆ.

ಲೋ ಬಿಪಿಯನ್ನು ನಿರ್ಲಕ್ಷಿಸದೇ, ಸರಿಯಾದ ಆಹಾರ ಹಾಗೂ ಜೀವನಶೈಲಿ ಬದಲಾವಣೆ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಬಹುದು. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಹಾಗೂ ವೈದ್ಯರ ಸಲಹೆ ಪಾಲಿಸುವುದು ಉತ್ತಮ. ಲೋ ಬಿಪಿ ತಾತ್ಕಾಲಿಕ ತೊಂದರೆ ಮಾತ್ರವಲ್ಲ, ನಿರ್ಲಕ್ಷಿಸಿದರೆ ಮಾರಕವಾಗಬಹುದು ಎಂಬುದನ್ನು ಮನದಲ್ಲಿ ಇಟ್ಟುಕೊಳ್ಳುವುದು ಅಗತ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!