BIG NEWS | LPG ಅಡುಗೆ ಅನಿಲ ದರ ಪ್ರತಿ ಸಿಲಿಂಡರ್ ಗೆ 50 ರೂ. ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಡುಗೆ ಅನಿಲ ಎಲ್‌ಪಿಜಿ ಪ್ರತಿ ಸಿಲಿಂಡರ್‌ ಬೆಲೆ 50 ರೂ. ಹೆಚ್ಚಿಸಿರುವುದಾಗಿ ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸೋಮವಾರ ತಿಳಿಸಿದ್ದಾರೆ.

ಈ ಏರಿಕೆ ಉಜ್ವಲಾ ಯೋಜನೆಯ ಫಲಾನುಭವಿಗಳಿಗೂ ಅನ್ವಯಿಸಲಿದೆ.

14.2 ಕಿಲೋ ಎಲ್​​ಪಿಜಿ ಸಿಲಿಂಡರ್ ಬೆಲೆ 803 ರೂ ಇದ್ದದ್ದು 853 ರೂಗೆ ಏರಿಕೆ ಆಗಲಿದೆ. ಉಜ್ವಲ ಸ್ಕೀಮ್​​ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಎಲ್​​ಪಿಜಿ ಸಿಗುತ್ತದಾದರೂ ಅವರಿಗೂ ಕೂಡ 50 ರೂ ಏರಿಕೆ ಆಗಿದೆ. 503 ರೂ ಇದ್ದ ಬೆಲೆ 553 ರೂಗೆ ಹೆಚ್ಚಳ ಆಗುತ್ತಿದೆ.

ಈ ಪರಿಷ್ಕರಣೆಯು ಸಾಮಾನ್ಯವಾಗಿ ಪ್ರತಿ 2-3 ವಾರಗಳಿಗೊಮ್ಮೆ ಆವರ್ತಕ ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಇತ್ತೀಚಿನ ಅಬಕಾರಿ ಸುಂಕ ಹೆಚ್ಚಳವು ಗ್ರಾಹಕರಿಗೆ ಹೊರೆಯಾಗೋದಿಲ್ಲ. ಆದರೆ, ಸಬ್ಸಿಡಿ ಅನಿಲ ಬೆಲೆಗಳಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಅನುಭವಿಸಿದ 43,000 ಕೋಟಿ ರೂ. ನಷ್ಟವನ್ನು ಸರಿದೂಗಿಸಲು ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!