ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರು ತಿಂಗಳೊಳಗೆ ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ಸಂಘದ ಅಧ್ಯಕ್ಷ ಬಿ.ಎಸ್. ಶರ್ಮಾ ಮಾತನಾಡಿ, ಬೇಡಿಕೆಗಳ ಕುರಿತು ವಿವಿಧ ರಾಜ್ಯಗಳ ಸದಸ್ಯರು ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಎಲ್‌ಪಿಜಿ ವಿತರಕರ ಬೇಡಿಕೆಗಳ ಕುರಿತು ನಾವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೂ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿ ಸಿಲಿಂಡರ್‌ಗೆ ಕನಿಷ್ಠ 150 ರೂ. ಕಮಿಷನ್ ಹೆಚ್ಚಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ. ಬೇಡಿಕೆ ಇಲ್ಲದಿದ್ದರೂ ದೇಶೀಯವಲ್ಲದ ಸಿಲಿಂಡರ್‌ಗಳನ್ನು ಸ್ವೀಕರಿಸಲು ತೈಲ ಕಂಪನಿಗಳು ವಿತರಕರನ್ನು ಒತ್ತಾಯಿಸುತ್ತಿದ್ದು, ಇದು ಕಾನೂನು ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.