April 12, 2026
Sunday, April 12, 2026
spot_img

IPL | ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅಬ್ಬರಕ್ಕೆ ಎಡವಿದ ಲಖನೌ: ಗುಜರಾತ್ ಟೈಟಾನ್ಸ್ ಗೆಲುವಿಗೆ ಸುಲಭ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅಬ್ಬರಕ್ಕೆ ಎಡವಿದ ಲಖನೌ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 164 ರನ್​ಗಳ ಸಾಧಾರಣ ಮೊತ್ತ ಗಳಿಸಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌ ತಂಡ ಉತ್ತಮ ಆರಂಭ ಸಿಗಲಿಲ್ಲ. ಮಿಚೆಲ್ ಮಾರ್ಷ್11 ರನ್​ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ನಾಯಕ ರಿಷಭ್ ಪಂತ್ 18 ರನ್​ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ತೆವಾಟಿಯಾಗೆ ಕ್ಯಾಚ್ ನೀಡಿ ಔಟ್ ಆದರು.

ಮತ್ತೊಂದೆಡೆ 30 ರನ್​ಗಳಿಸಿದ್ದ ಐಡೆನ್ ಮಾರ್ಕ್ರಮ್ ವಾಷಿಂಗ್ಟನ್ ಸುಂದರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. 9 ರನ್​ಗಳಿಸಿದ್ದ ಆಯುಷ್ ಬದೋನಿ ಕೂಡ ಪೆವಿಲಿಯನ್​ ನತ್ತ ಮುಖಮಾಡಿದರು. ಪೂರನ್ 18 ರನ್​ಗಳಿಸಿ ಪ್ರಸಿದ್ಧ್ ಕೃಷ್ಣಗೆ 3ನೇ ಬಲಿಯಾದರು.

ಅಬ್ದುಲ್ ಸಮದ್ 18 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಲಖನೌ ಗೆಲುವಿನ ರೂವಾರಿಮುಕುಲ್ ಚೌಧರಿ 18 ರನ್​ಗಳಿಸಿ ಕೃಷ್ಣ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬಟ್ಲರ್​ಗೆ ಕ್ಯಾಚ್ ನೀಡಿದರು.

ಪ್ರಸಿದ್ಧ್ ಕೃಷ್ಣ 4 ಓವರ್​ಗಳಲ್ಲಿ ಕೇವಲ 28 ರನ್ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್​ಗಳನ್ನು ಕಬಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !