June 17, 2026
Wednesday, June 17, 2026
spot_img

ಇನ್‌ಸ್ಟಾದಲ್ಲಿ ಸ್ನೇಹ ಮಾಡಿ ಬೆತ್ತಲೆ ವಿಡಿಯೋ ಕಳಿಸು ಅಂತ ಟೀಚರ್ ಗೆ ಕಾಟ ಕೊಟ್ಟ ಕಾಮುಕ: ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಮೋಸಗಳು ಮತ್ತೊಮ್ಮೆ ಆತಂಕ ಮೂಡಿಸಿವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಿಕ್ಷಕಿಯೊಬ್ಬಳನ್ನು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ ಯುವಕ, ಮೊದಲಿಗೆ ಹಳೆಯ ಕ್ಲಾಸ್‌ಮೇಟ್ ಎಂದು ಪರಿಚಯಿಸಿಕೊಂಡು ಬಳಿಕ ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಅಪರಿಚಿತ ಯುವಕ ಮೊದಲಿಗೆ ಶಿಕ್ಷಕಿಯ ವಿಶ್ವಾಸ ಗಳಿಸಲು ಸ್ನೇಹ ಬೆಳೆಸಿಕೊಂಡಿದ್ದ. ನಂತರ ತಾನು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ, ಬದುಕಲು ಹೆಚ್ಚು ದಿನಗಳಿಲ್ಲ ಎಂದು ಹೇಳಿ ಕರುಣೆ ಮೂಡಿಸುವ ಪ್ರಯತ್ನ ಮಾಡಿದ್ದಾನೆ.

ಮುಂದೆ ಆತ ಅಸಭ್ಯ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆ. ಶಿಕ್ಷಕಿ ಅದನ್ನು ತಿರಸ್ಕರಿಸಿದ ಬಳಿಕ, ಭಾವನಾತ್ಮಕ ಒತ್ತಡ ಸೃಷ್ಟಿಸಿ ಖಾಸಗಿ ವಿಡಿಯೋ ಕಳುಹಿಸುವಂತೆ ಮನವಿ ಮಾಡಿದ್ದಾನೆ. ವಿಡಿಯೋ ಸಿಕ್ಕ ಬಳಿಕ ತನ್ನ ವರ್ತನೆ ಬದಲಿಸಿಕೊಂಡು ಹಣ ಕೊಡು, ನೇರವಾಗಿ ಭೇಟಿಯಾಗು, ಇಲ್ಲದಿದ್ದರೆ ಅದನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ:

ಈ ಬೆದರಿಕೆಯಿಂದ ಆತಂಕಗೊಂಡ ಶಿಕ್ಷಕಿ ಧೈರ್ಯವಾಗಿ ಪೊಲೀಸರ ನೆರವು ಪಡೆದುಕೊಂಡಿದ್ದಾರೆ. ಯುವಕನನ್ನು ಬೆಂಗಳೂರಿಗೆ ಕರೆಸುವಂತೆ ಮಾತನಾಡಿ, ಮುಂಚಿತವಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಬಂದ ಆರೋಪಿಯನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಬಂಧಿಸುವ ವೇಳೆ ಆತ ತನ್ನ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಜಾಗೃತಿ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಅಪರಿಚಿತರೊಂದಿಗೆ ಖಾಸಗಿ ಮಾಹಿತಿ ಅಥವಾ ವಿಡಿಯೋ ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !