April 9, 2026
Thursday, April 9, 2026
spot_img

ಐಪಿಎಲ್‌ಗೂ ಮುನ್ನ ಲೋಗೋ ಬದಲಿಸಿದ ಲಕ್ನೋ ಸೂಪರ್ ಜೈಂಟ್ಸ್: ಈ ಬಾರಿ ಅದೃಷ್ಟ ಒಲಿಯುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಸೀಸನ್‌ಗೆ ಸಿದ್ಧತೆಗಳು ಜೋರಾಗುತ್ತಿವೆ. ಟಿ20 ವಿಶ್ವಕಪ್ ಮುಗಿದ ತಕ್ಷಣವೇ ಲೀಗ್ ಆರಂಭವಾಗುವ ಸಾಧ್ಯತೆ ಇದ್ದು, ಮಾರ್ಚ್ ಅಂತ್ಯದೊಳಗೆ ಪಂದ್ಯಗಳು ಶುರುವಾಗಬಹುದು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಲೋಗೋವನ್ನು ಬದಲಾಯಿಸಿ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬಂದಿದೆ.

ಹಿಂದಿನ ಲೋಗೋದಲ್ಲಿ ರೆಕ್ಕೆಗಳ ನಡುವೆ ಬ್ಯಾಟ್ ಮತ್ತು ಚೆಂಡಿನ ಆಕೃತಿ ಇತ್ತು. ಈಗಿನ ಹೊಸ ಚಿಹ್ನೆಯಲ್ಲಿ ಉತ್ತರ ಪ್ರದೇಶದ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಅಂಶಗಳನ್ನು ಸೇರಿಸಲಾಗಿದೆ. ಎಡಬಲ ಭಾಗದ ರೆಕ್ಕೆಗಳು ಗರುಡನ ರೂಪಕವಾಗಿದ್ದು, ಮಧ್ಯದಲ್ಲಿರುವ ಕಿರೀಟ ತಂಡದ ಗರ್ವ ಮತ್ತು ರಾಜತ್ವವನ್ನು ಸೂಚಿಸುತ್ತದೆ. ಕಿರೀಟದ ಕೆಳಭಾಗದಲ್ಲಿರುವ ಆನೆ ಶಕ್ತಿ ಮತ್ತು ಗಣೇಶನ ಆಶೀರ್ವಾದವನ್ನು ಸಂಕೇತಿಸುತ್ತದೆ.

ಇದನ್ನೂ ಓದಿ:

ಆರ್‌ಪಿಎಸ್‌ಜಿ ಗ್ರೂಪ್ ಉಪಾಧ್ಯಕ್ಷ ಶಾಶ್ವತ್ ಗೋಯೆಂಕಾ ಅವರ ಪ್ರಕಾರ, ಹೊಸ ಲೋಗೋ ತಂಡದ ಉತ್ಸಾಹ ಮತ್ತು ಹೊಸ ಗುರಿಗಳನ್ನು ಪ್ರತಿಬಿಂಬಿಸುತ್ತದೆ. 2022ರಲ್ಲಿ ಐಪಿಎಲ್ ಪ್ರವೇಶಿಸಿದ ಲಕ್ನೋ ತಂಡ ಪ್ಲೇಆಫ್ ತಲುಪಿದರೂ ಇನ್ನೂ ಫೈನಲ್‌ಗೆ ಪಾದಾರ್ಪಣೆ ಮಾಡಿಲ್ಲ. ಕಳೆದ ಎರಡು ಸೀಸನ್‌ಗಳಲ್ಲಿ ಏಳನೇ ಸ್ಥಾನದಲ್ಲೇ ಮುಗಿಸಿರುವ ತಂಡಕ್ಕೆ ಹೊಸ ಲೋಗೋ ಹೊಸ ಅದೃಷ್ಟ ತರಬಹುದೇ ಎಂಬುದನ್ನು ಕಾದುನೋಡಬೇಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !