ತಿರುಪತಿ ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ ಚಿನ್ನದ ಆಭರಣ ನೀಡಿದ ಲಕ್ನೋ ಟೀಂ ಮಾಲೀಕ ಸಂಜೀವ್ ಗೋಯೆಂಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ ಘೋಷಣೆ ಆಗಿರುವುದರಿಂದ ಐಪಿಎಸ್ ಪಂದ್ಯ ಮತ್ತೆಶುರುವಾಗಲಿದ್ದು, ಈ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಇಂದುತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಿದ್ದಾರೆ.

ಈ ವೇಳೆ ದೇವರ ದರುಶನ ಪಡೆದ ಅವರು ವೆಂಕಟೇಶ್ವರ ಸ್ವಾಮಿಗೆ 3.63 ಕೋಟಿ ರೂ. ಬೆಲೆ ಬಾಳುವ ಸುಮಾರು 5 ಕೆಜಿ ತೂಕದ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ವಿಷ್ಣುವಿನ ಅವತಾರವಾದ ವೆಂಕಟೇಶ್ವರನಿಗೆ ಸಮರ್ಪಿತವಾದ ತಿರುಮಲ ದೇವಾಲಯವು ಒಂದು ಮಹತ್ವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಾಗಿದೆ. ಭಾರತ ಮತ್ತು ವಿದೇಶಗಳಿಂದ ಭಕ್ತರು ಪ್ರತಿವರ್ಷ ಆಶೀರ್ವಾದ ಪಡೆಯಲು ಈ ದೇವಾಲಯಕ್ಕೆ ಬರುತ್ತಾರೆ. ಸಂಜೀವ್ ಗೋಯೆಂಕಾ ನೀಡಿದ ಚಿನ್ನಾಭರಣದ ಸೆಟ್​ನಲ್ಲಿ ದೇವರ ಕೈಮುದ್ರೆಗಳು, ಚಿನ್ನಾಭರಣಗಳು ಸೇರಿವೆ. ಇವುಗಳನ್ನು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಆಭರಣಗಳು ಅಮೂಲ್ಯ ವಜ್ರಗಳು ಮತ್ತು ರತ್ನಗಳಿಂದ ಕೂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!