ಹೊಸದಿಗಂತ ಡಿಜಿಟಲ್ ಡೆಸ್ಕ್
ಜರ್ಮನಿಯ ಫ್ರಾಂಕ್‌ಫರ್ಟ್ ನಗರದಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಲುಫ್ತಾನ್ಸಾ ವಿಮಾನವು ವೈದ್ಯಕೀಯ ತುರ್ತುಸ್ಥಿತಿ ಏರ್ಪಟ್ಟ ಹಿನ್ನೆಲೆಯಲ್ಲಿ ಟರ್ಕಿಯ ಇಸ್ತಾಂಬುಲ್ನಲ್ಲಿ ಲ್ಯಾಂಡಿಂಗ್ ಮಾಡಲಾಗಿದ್ದು, ಪ್ರಯಾಣಿಕರು 24 ಗಂಟೆ ಪರದಾಡಿದ ಘಟನೆ ನಡೆದಿದೆ.
ಮಂಗಳವಾರ ಫ್ರಾಂಕ್‌ಫರ್ಟ್ ನಿಂದ ಹೊರಟಿದ್ದ ಲುಫ್ಥಾನ್ಸಾ LH 754 ವಿಮಾನವವನ್ನು ಅನಿವಾರ್ಯವಾಗಿ ಇಸ್ತಾನ್‌ಬುಲ್‌ಗೆ ತಿರುಗಿಸಬೇಕಾಯಿತು. ಈ ವಿಮಾನವು ಜರ್ಮನಿಯಿಂದ ಮಧ್ಯಾಹ್ನ 1.05 ಕ್ಕೆ ಹೊರಟು ಮರುದಿನ ಮುಂಜಾನೆ 1.25 ಕ್ಕೆ ಭಾರತಕ್ಕೆ ಆಗಮಿಸಲಬೇಕಿತ್ತು. ವೈದ್ಯಕೀಯ ತುರ್ತುಸ್ಥಿತಿ ಸಂಭವಿಸಿದಾಗ ವಿಮಾನವು ಟರ್ಕಿಶ್ ವಾಯುಪ್ರದೇಶದ ಕಪ್ಪು ಸಮುದ್ರದ ಮೇಲಿತ್ತು ಮತ್ತು ಅದನ್ನು ಅನಿವಾರ್ಯವಾಗಿ ಇಸ್ತಾನ್‌ಬುಲ್‌ಗೆ ತಿರುಗಿತು. ಇದರಿಂದಾಗಿ ಪ್ರಯಾಣಿಕರಿಗೆ 24 ಗಂಟೆಗಳ ವಿಳಂಬದ ನಂತರ ಗುರುವಾರ ಬೆಳಿಗ್ಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ.
ಈ ಬಗ್ಗೆ ಲುಫ್ಥಾನ್ಸ ಹೇಳಿಕೆ ಬಿಡುಗಡೆ ಮಾಡಿದ್ದು, “ತುರ್ತುಸ್ಥಿತಿಯ ಏರ್ಪಟ್ಟಿದ್ದರಿಂದ ಆಮ್ಲಜನಕ ಸಿಲಿಂಡರ್ಗಳನ್ನು ಬದಲಾಯಿಸುವ ಅನಿವಾರ್ಯತೆ ಏರ್ಪಟ್ಟಿತು. ದುರದೃಷ್ಟವಶಾತ್, ಇದು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಪ್ರಯಾಣಿಕರ ಅನಾನುಕೂಲತೆಗೆ ವಿಶಾಧಿಸುತ್ತೇವೆ ಎಂದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ