Lunar Eclipse | ಸೆಪ್ಟೆಂಬರ್‌ನಲ್ಲಿ ಭಾರತದಿಂದ ಗೋಚರಿಸಲಿದೆ ಬ್ಲಡ್ ಮೂನ್!

ಈ ವರ್ಷದ ಮಾರ್ಚ್‌ನಲ್ಲಿ ನಡೆದ ರಕ್ತ ಚಂದ್ರಗ್ರಹಣವನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದರು. ಈಗ ಮತ್ತೆ ಒಂದು ಅಪರೂಪದ ಕ್ಷಣ ಸೆಪ್ಟೆಂಬರ್‌ನಲ್ಲಿ ಕಾದಿದೆ. ಸೆಪ್ಟೆಂಬರ್ 7ರಂದು ಭಾರತದಲ್ಲಿಯೂ ಗೋಚರಿಸುವ ರಕ್ತ ಚಂದ್ರಗ್ರಹಣ ಜನರಿಗೆ ಮತ್ತೊಮ್ಮೆ ವಿಶಿಷ್ಟ ಅನುಭವವನ್ನು ನೀಡಲಿದೆ.

ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ರಾತ್ರಿ 8:58 ಕ್ಕೆ ಆರಂಭವಾಗಿ, ಸೆಪ್ಟೆಂಬರ್ 8ರಂದು ಬೆಳಗ್ಗೆ 1:25ರ ವರೆಗೆ ಮುಂದುವರಿಯಲಿದೆ. ರಾತ್ರಿ 11:00ರಿಂದ ಬೆಳಗ್ಗೆ 12:22ರ ವರೆಗೆ ಇದು ತನ್ನ ಉತ್ತುಂಗಕ್ಕೇರುತ್ತದೆ.

ಭಾರತದಲ್ಲಿ ದೆಹಲಿ, ಲಕ್ನೋ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಗೋವಾ ಸೇರಿದಂತೆ ಬಹುತೇಕ ಎಲ್ಲ ನಗರಗಳಿಂದ ಈ ದೃಶ್ಯ ಕಾಣಿಸಿಕೊಳ್ಳಲಿದೆ. ಆದರೆ ಹವಾಮಾನ ಹಾಗೂ ಮಾಲಿನ್ಯ ಪರಿಸ್ಥಿತಿಗಳು ಗೋಚರತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜಾಗತಿಕವಾಗಿ ನೋಡಿದರೆ, ಚೀನಾ, ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾ, ರಷ್ಯಾ, ಅರಬ್ ರಾಷ್ಟ್ರಗಳಲ್ಲಿ ಈ ರಕ್ತ ಚಂದ್ರ ಸ್ಪಷ್ಟವಾಗಿ ಗೋಚರಿಸಲಿದೆ. ಪಶ್ಚಿಮ ಯುರೋಪ್, ಯುಕೆ ಹಾಗೂ ಅಲಾಸ್ಕಾದ ಪಶ್ಚಿಮ ಭಾಗಗಳಲ್ಲಿ ಮಾತ್ರ ಭಾಗಶಃ ಗ್ರಹಣ ಕಾಣಿಸಿಕೊಳ್ಳಲಿದೆ.

ಭೂಮಿಯ ನೆರಳು ಚಂದ್ರನನ್ನು ಆವರಿಸಿದಾಗ ಒಟ್ಟು ಚಂದ್ರಗ್ರಹಣ ಉಂಟಾಗುತ್ತದೆ. ಕತ್ತಲೆಯಾಗುವ ಬದಲು ಚಂದ್ರನು ಕೆಂಪು ಬಣ್ಣಕ್ಕೆ ತಿರುಗುವುದರಿಂದ ಇದನ್ನು “ಬ್ಲಡ್ ಮೂನ್” ಎಂದು ಕರೆಯಲಾಗುತ್ತದೆ. ಈ ಬಾರಿ ಇದು ಹುಣ್ಣಿಮೆಯ ದಿನದಂದು ಸಂಭವಿಸುತ್ತಿರುವುದರಿಂದ, ಕಾರ್ನ್ ಮೂನ್ ಎಕ್ಲಿಪ್ಸ್ ಎಂದೂ ಕರೆಯಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಈ ರಕ್ತ ಚಂದ್ರಗ್ರಹಣವು ಭಾರತದ ಖಗೋಳಾಸಕ್ತರಿಗೆ ಅಪರೂಪದ ವೀಕ್ಷಣೆಯ ಅವಕಾಶ. ಪ್ರಕೃತಿಯ ಈ ಅಸಾಮಾನ್ಯ ನೋಟವನ್ನು ಜನರು ತಮ್ಮ ಕಣ್ಣುಗಳಿಂದ ನೋಡುವ ಅವಕಾಶ ದೊರೆಯುತ್ತಿರುವುದು ನಿಜಕ್ಕೂ ವಿಶೇಷ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!