ಹೊಸದಿಗಂತ ವರದಿ ಕಲಬುರಗಿ:
ವರ್ಷದ ಎರಡನೆ ಮತ್ತು ಕೊನೆಯ ಚಂದ್ರ ಗ್ರಹಣ ಸಂಭವಿಸಿದ ಹಿನ್ನಲೆ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಆಗಿವೆ.
ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನ, ಅಫಜಲಪುರ ತಾಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಬಾಗಿಲು, ಭಾವಸಾರ ಕ್ಷತ್ರಿಯ ಸಮಾಜದ ದೇವಸ್ಥಾನ, ಚಂದ್ರ ಗ್ರಹಣದ ಸಂದರ್ಭದಲ್ಲಿ ದರ್ಶನ ಬಂದ್ ಮಾಡಲಾಗಿದೆ.
ಸಂಜೆ ಗ್ರಹಣ ಮೋಕ್ಷದ ನಂತರ ದೇವಸ್ಥಾನ ಶುಚಿಗೊಳಿಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ಥಾನಗಳ ಕಮಿಟಿ ಹಾಗೂ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.