ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ 15 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ವರದಿಯಾಗಿದೆ.
ಹೀಗೆ ಮಾಡಿದ್ದು ಬೇರ‍್ಯಾರು ಅಲ್ಲ, ಧೋನಿ ಬ್ಯುಸಿನೆಸ್ ಪಾರ್ಟ್‌ನರ‍್ಸ್ ಎನ್ನಲಾಗಿದೆ. ಅರ್ಕಾ ಸ್ಪೋರ್ಟ್ಸ್ ಆಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಸೌಮ್ಯ ಬಿಸ್ವಾಸ್ ಹಾಗೂ ಮಿಹಿರ್ ದಿವಾಕರ್ ಎನ್ನುವವರ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ ಎನ್ನಲಾಗಿದೆ.
ವಿಶ್ವಮಟ್ಟದ ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡಲು ಮಾಜಿ ಇದ್ಯಮ ಪಾಲುದಾರರಾದ ದಿವಾಕರ್ ಧೋನಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಷರತ್ತುಗಳನ್ನು ಪಾಲಿಸಿಲ್ಲ ಎಂದು ಧೋನಿ ಕೋರ್ಟ್ ಮೆಟ್ಟಿಲೇರಿದ್ದಾರೆ.